Home News iPhone offer: ಐಫೋನ್ ಬೆಲೆಯಲ್ಲಿ ಭಾರೀ ಕಡಿತ- ಕೊಳ್ಳಲು ಮುಗಿಬಿದ್ದ ಜನ !

iPhone offer: ಐಫೋನ್ ಬೆಲೆಯಲ್ಲಿ ಭಾರೀ ಕಡಿತ- ಕೊಳ್ಳಲು ಮುಗಿಬಿದ್ದ ಜನ !

Iphone 15
Image source- The articles directory

Hindu neighbor gifts plot of land

Hindu neighbour gifts land to Muslim journalist

iPhone Offer: ಆಪಲ್‌ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಎಲ್ಲರೂ ಐಫೋನ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಐಫೋನ್ ಮೇಲೆ ಭರ್ಜರಿ ಆಫರ್ (iPhone Offer) ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಫೋನ್ ಲಭ್ಯವಾಗಲಿದೆ.

ಆ್ಯಪಲ್ ಕಂಪನಿ ಕೆಲ ಐಫೋನ್ ಮೇಲೆ ಬಂಪರ್ ಆಫರ್ ಘೋಷಿಸಿದೆ. ಸಾಲು ಸಾಲು ಹಬ್ಬದ ಪ್ರಯುಕ್ತ ಆ್ಯಪಲ್ ತನ್ನ ಆಯ್ದ ಐಫೋನ್ ಮೇಲೆ ಭಾರಿ ಬೆಲೆ ಕಡಿತ ಮಾಡಿದೆ. ಆ್ಯಪಲ್ ಐಫೋನ್ 14, ಹಾಗೂ 13 ಮಾಡೆಲ್‌ನಲ್ಲಿ ಎಲ್ಲಾ ವೇರಿಯೆಂಟ್ ಮೇಲೆ ಬೆಲೆ ಕಡಿತಗೊಳಿಸಿದೆ. ಈ ಆಫರ್ ಕೆಲ ದಿನದಗಳ ಮಾತ್ರ ಇರಲಿದೆ.

ಐಫೋನ್ 12 (64GB) : ಆ್ಯಪಲ್ ಐಫೋನ್ 12 (64GB) ಫೋನ್ ಮೇಲೆ 16,910 ರೂಪಾಯಿ ಕಡಿತಗೊಳಿಸಲಾಗಿದೆ. ಇದೀಗ 48,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. 256GB ಸ್ಟೋರೇಜ್ ವೇರಿಯೆಂಟ್ ಫೋನ್ ಮೇಲೆ 15,910 ರೂಪಾಯಿ ರಿಯಾಯಿತಿ ನೀಡಲಾಗಿದ್ದು, 64,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ಐಫೋನ್ 13 (128GB) : ಆ್ಯಪಲ್ ಐಫೋನ್ 13(128GB) ಫೋನ್ ಬೆಲೆಯಲ್ಲಿ 20,000 ರೂಪಾಯಿ ಕಡಿತಗೊಳಿಸಲಾಗಿದ್ದು, ಸದ್ಯ 59,900 ರೂಪಾಯಿಗೆ ಲಭ್ಯವಿದೆ. 512GB ಫೋನ್ ಬೆಲೆಯಲ್ಲಿ 20,000 ರೂಪಾಯಿ ಕಡಿತಗೊಳಿಸಲಾಗಿದ್ದು, ಇದೀಗ 89,900 ರೂಪಾಯಿಗೆ ಲಭ್ಯವಿದೆ. 256GB ಸ್ಟೋರೇಜ್ ಫೋನ್ 89,900 ರೂಪಾಯಿ ಬದಲು 69,900 ರೂಪಾಯಿಗೆ ಲಭ್ಯವಿದೆ.

ಐಫೋನ್ 14 (128GB) : ಆ್ಯಪಲ್ ಐಫೋನ್ 14 (128GB) ಫೋನ್ ಬೆಲೆ 79,900 ರೂಪಾಯಿ ಇದ್ದು, ಇದೀಗ 69,900 ರೂಪಾಯಿಗೆ ಲಭ್ಯವಿದೆ. 10,000 ರೂಪಾಯಿ ಕಡಿತಗೊಳಿಸಲಾಗಿದೆ. ಜೊತೆಗೆ ಆ್ಯಪಲ್ ಐಫೋನ್ 14 (256GB) ಫೋನ್ ಬೆಲೆಯಲ್ಲೂ 10,000 ರೂಪಾಯಿ ಕಡಿತಗೊಳಿಸಲಾಗಿದೆ.

ಐಫೋನ್14 (512GB) : 1,09,900 ರೂಪಾಯಿ ಬೆಲೆಯ 512GB ಸ್ಟೋರೇಜ್ ಸಾಮರ್ಥ್ಯದ ಆ್ಯಪಲ್ ಐಫೋನ್ 14 ಬೆಲೆ ಇದೀಗ 99,900 ರೂಪಾಯಿಗೆ ಲಭ್ಯವಿದೆ. ಈ ವೇರಿಯೆಟ್ ಮೇಲೂ 10,000 ರೂಪಾಯಿ ಕಡಿತಗೊಳಿಸಲಾಗಿದೆ.

ಐಫೋನ್ 14 ಪ್ಲಸ್ (128GB) : ಆ್ಯಪಲ್ ಐಫೋನ್ 14 ಪ್ಲಸ್ (128GB) ಫೋನ್ 89,900 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಇದೀಗ 79,900 ರೂಪಾಯಿಗೆ ಲಭ್ಯವಿದೆ. 256GB ವೇರಿಯೆಂಟ್ ಫೋನ್ ಬೆಲೆಯಲ್ಲೂ 10,000 ರೂಪಾಯಿ ಕಡಿತಗೊಳಿಸಲಾಗಿದ್ದು, 89,900 ರೂಪಾಯಿಗೆ ಲಭ್ಯವಿದೆ.

ಐಫೋನ್ 14 ಪ್ಲಸ್(512GB) : ಆ್ಯಪಲ್ ಐಫೋನ್ 14 ಪ್ಲಸ್ ಫೋನ್ ಬೆಲೆ 1,19,900 ರೂಪಾಯಿ ಇದ್ದು, ಇದೀಗ 1,09,900 ರೂಪಾಯಿಗೆ ಲಭ್ಯವಿದೆ. ಇದು 512GB ಸ್ಟೋರೇಜ್ ಸಾಮರ್ಥ್ಯದ ಐಫೋನ್ ಆಗಿದೆ. ಸದ್ಯ ಈ ಆಫರ್ ಲಿಮಿಟೆಡ್ ಆಗಿದ್ದು, ಆದಷ್ಟು ಬೇಗನೆ ಖರೀದಿಸಿ!!.