Home News Muruga Shri: ಚಿತ್ರದುರ್ಗದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ !! ಎಂತಾ ದುರ್ವಿಧಿ ಇದು?

Muruga Shri: ಚಿತ್ರದುರ್ಗದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ !! ಎಂತಾ ದುರ್ವಿಧಿ ಇದು?

Hindu neighbor gifts plot of land

Hindu neighbour gifts land to Muslim journalist

Muruga Shri: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಜೈಲು ಸೇರಿ ಬಳಿಕ ಜಾಮೀನ ಮೇಲೆ ಹೊರಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಶುರುವಾಗಿದೆ.

 

ಹೌದು, ಜಿಲ್ಲೆಯ ಶ್ರೀ ಮುರುಘಾ ಮಠದ (Murugha Matha) ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿಗೆ ರಾಜ್ಯ ಸರ್ಕಾರ ನೀಡಿದ 35 ಕೋಟಿ ರೂ. ಅನುದಾನ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ.

 

ಹಣ ದುರುಪಯೋಗ ಬಗ್ಗೆ ಮಾಜಿ ಸಚಿವ ಏಕಾಂತಯ್ಯ ದೂರು ನೀಡಿದ ಹಿನ್ನೆಲೆ ಎಡಿಸಿ ಕುಮಾರಸ್ವಾಮಿ, PWD ಅಧಿಕಾರಿಗಳನ್ನೊಳಗೊಂಡಿದ್ದ ತನಿಖಾ ಸಮಿತಿ ವರದಿ ಸಿದ್ಧಪಡಿಸಿದೆ. ಸರ್ಕಾರದ ಅನುದಾನ ಅನುಷ್ಠಾನ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಇಂದು ವರದಿ ಸಲ್ಲಿಸಲಾಗಿದೆ.

 

ಅಂದಹಾಗೆ ಮುರುಘಾಮಠದ ಹಿಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಿಸಲು ಅಂದಾಜು ರೂ.2802 ಕೋಟಿ ರೂ. ವೆಚ್ಚದ ಅಂದಾಜು ವೆಚ್ಚ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದಿಂದ ರೂ.35.00 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಈವರೆಗೆ 26 ಕೋಟಿ 35 ಲಕ್ಷ 33 ಸಾವಿರ 503 ರೂ. ಬಳಕೆ ಆಗಿದೆ. ಉಳಿದ ಹಣ ಖರ್ಚಿನ ಬಗ್ಗೆ ಮಠದವರಿಗೆ ಅಧಿಕೃತ ದಾಖಲೆ ಕೇಳಿದ್ದೇವೆ. ಆದರೆ ಈವರೆಗೆ ಮಠದವರು ಅಧಿಕೃತ ದಾಖಲೆ ನೀಡಿಲ್ಲ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.