Home News Prabhakara Kalyani: ‘ಕಾಂತಾರ’ ಚಿತ್ರದ ಮತ್ತೊಬ್ಬ ಖ್ಯಾತ ನಟ ಹೃದಯಾಘಾತಕ್ಕೆ ಬಲಿ!!

Prabhakara Kalyani: ‘ಕಾಂತಾರ’ ಚಿತ್ರದ ಮತ್ತೊಬ್ಬ ಖ್ಯಾತ ನಟ ಹೃದಯಾಘಾತಕ್ಕೆ ಬಲಿ!!

Hindu neighbor gifts plot of land

Hindu neighbour gifts land to Muslim journalist

Prabhakara Kalyani : ಕಾಂತಾರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ.

ಕಾಂತಾರ ಮೊದಲನೇಯ ಚಿತ್ರದಲ್ಲಿ ನ್ಯಾಯವಾದಿಯಾಗಿ ಅಭಿನಯಿಸಿದ್ದ ಪೆರ್ಡೂರು ಮೂಲದ ಟಿ. ಪ್ರಭಾಕರ್‌ಕಲ್ಯಾಣಿ ಬ್ಯಾಂಕ್ ಆಫ್‌ ಬರೋಡಾದ ನಿವೃತ್ತ ಉದ್ಯೋಗಿಯಾಗಿದ್ದ ಇವರು, ರಂಗಭೂಮಿ ಕಲಾವಿದರಾಗಿ ವಿವಿಧ ನಾಟಕದಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡವರು.

ಅವರು ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ ತಲೆ ಸುತ್ತಿ ಬಿದ್ದಿದ್ದರು. ಇಂದು ಮಲಗಿದಲ್ಲಿಯೇ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 5 ವರ್ಷದ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸ್ಟಂಟ್ ಹಾಕಲಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ. ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಪ್ರಭಾಕರ್, ವಿವಿಧ ರಂಗ ನಾಟಕಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು. ಅವರ ಅಂತಿಮ ವಿಧಿವಿಧಾನಗಳನ್ನು ಶುಕ್ರವಾರ ಬೀಡಿನಗುಡ್ಡೆ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

ಇದನ್ನು ಓದಿ: Pratap Simha: ಧರ್ಮಸ್ಥಳವನ್ನು ಕಬಳಿಸಲು ಸರಕಾರ ಸಾಕ್ಷಿ ಹುಡುತ್ತಿದೆ: ಪ್ರತಾಪ್‌ ಸಿಂಹ ಸ್ಫೋಟಕ ಆರೋಪ