Home News Annadaneshwar Mut: ಅನ್ನದಾನೇಶ್ವರ ಮಠವೂ ‘ವಕ್ಫ್’ ಆಸ್ತಿ ಎಂದು ನಮೂದು – ರಿಜಿಸ್ಟರ್ ಮಾಡಿದ್ದೇ ಬಿಜೆಪಿ...

Annadaneshwar Mut: ಅನ್ನದಾನೇಶ್ವರ ಮಠವೂ ‘ವಕ್ಫ್’ ಆಸ್ತಿ ಎಂದು ನಮೂದು – ರಿಜಿಸ್ಟರ್ ಮಾಡಿದ್ದೇ ಬಿಜೆಪಿ ಗೌರ್ಮೆಂಟ್ !! ಏನಿದು ಶಾಕಿಂಗ್ ನ್ಯೂಸ್?!

Hindu neighbor gifts plot of land

Hindu neighbour gifts land to Muslim journalist

Annadaneshwar Mut: ಗದಗ ಜಿಲ್ಲೆಯ ನರೇಗಲ್‌ನ ಅನ್ನದಾನೇಶ್ವರ ಮಠ(Annadaaneswhar Mut)ದ 500 ವರ್ಷಗಳಷ್ಟು ಹಳೆಯ ಭೂಮಿಯನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ. 2019-20ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಮಠದ ಸ್ವಾಮೀಜಿಗಳು ಆರೋಪಿಸಿದ್ದಾರೆ. ಹೀಗಾಗಿ ಮಠದ ಆಡಳಿತ ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಎಂದು ರಾಜ್ಯಾದ್ಯಂತ ಬಿಜೆಪಿ(BJP) ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಜಮೀನಿನ ಪಹನೀಯಲ್ಲೂ ಕೂಡ ಇದೀಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ಮಠದ ಶ್ರೀಗಳಾದ ಹಾಲಕೆರೆಯ ಮುಪ್ಪಿನ ಬಸವಲಿಂಗ ಶ್ರೀಗಳು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದು 2019-20 ರ ಬಿಜೆಪಿ ಅವಧಿಯಲ್ಲಿ ಈ ಒಂದು ಮಠದ ಹೆಸರನ್ನು ವಕ್ಫ್ ಗೆ ಸೇರ್ಪಡೆಯಾಗಿದೆ ಎಂದು ಅನ್ನದಾನೇಶ್ವರ ಮಠದ ಶ್ರೀಗಳು ಹೇಳಿಕೆ ನೀಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಅನ್ನದಾನೇಶ್ವರ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಈ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಪಹಣಿಯಲ್ಲಿ ನಮೂದಾಗಿದ್ದನ್ನು ನೋಡಿ ನಾನಾಗೆ ಹಾಗೂ ಭಕ್ತರಿಗೆ ಶಾಕ್ ಆಗಿದೆ. ಮಠದ 11.19 ಎಕರೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸರ್ವೆ ನಂಬರ್ 410/2B 15.6 ಜಮೀನು ಮಠಕ್ಕೆ ದಾನವಾಗಿ ಬಂದಿದೆ. 15 ಎಕರೆ 6 ಗುಂಟೆ ಜಾಗದಲ್ಲಿ 11 ಎಕರೆ 19 ಗುಂಟೆ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ರೆಹಮಾನ್ ಶಾವ್ಲಿ ದರ್ಗಾ ಆಸ್ತಿ ಅಂದು ಅದರಲ್ಲಿ ನಮೂದಿಸಲಾಗಿದೆ. ನೋಟಿಸ್ ನೀಡದೆ ಏಕಾಏಕಿ ಹೆಸರಲ್ಲಿ ಪಹಣಿ ತಿದ್ದುಪಡಿ ಮಾಡಲಾಗಿದೆ ಎಂದು ಶ್ರೀಗಳು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಭೂಮಿಯನ್ನು ಮಠಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಲಾಗಿದೆ.