Home News Ankola: ಅಂಕೋಲಾ ಶಿರೂರಿನ ಭೂಕುಸಿತ ಪ್ರಕರಣ: ಕೊನೆಗೂ ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲು!

Ankola: ಅಂಕೋಲಾ ಶಿರೂರಿನ ಭೂಕುಸಿತ ಪ್ರಕರಣ: ಕೊನೆಗೂ ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲು!

Hindu neighbor gifts plot of land

Hindu neighbour gifts land to Muslim journalist

Ankola: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಕಳೆದ ವರ್ಷದ ಜುಲೈನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೊನೆಗೂ ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಭೂಕುಸಿತದಲ್ಲಿ 11 ಮಂದಿ ಮೃತಪಟ್ಟಿದ್ದರು, ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.

 

ಜಿಲ್ಲಾ ಎಸ್‌ಪಿ ನಾರಾಯಣ್ ಅವರ ಸೂಚನೆಯ ಮೇರೆಗೆ, ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಠಪತಿ ಅವರು ಐಆರ್‌ಬಿ ಅಧಿಕಾರಿಗಳಾದ ರವೀಂದ್ರ ಡಿ. ಮಹೇಶ್ಕರ್, ರವೀಂದ್ರ ದುರಿವಾಲ್, ಜಶ್ ರಾಮ್ರೆಸ್, ದೀಪಾಲಿ ಹೌಸ್ಕರ್, ವಿಜಯ್ ಭಟ್, ಬಜರಂಗ್ ಲಾಲ್ ಗುಪ್ತಾ, ಸಂದೀಪ್ ಜೇ ಸಾಹ್, ಪೃಥ್ವಿ ಸವಾಲಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗಿತ್ತು, ಮತ್ತು ಫೆಬ್ರವರಿ 24 ರಂದು ಅಂಕೋಲಾ ನ್ಯಾಯಾಲಯವು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಆದರೆ, ಎರಡು ದಿನಗಳ ಹಿಂದೆ ಈ ಆದೇಶ ಪಾಲಿಸದ ಕಾರಣ ಸಾರ್ವಜನಿಕರು ಅಂಕೋಲಾ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭ, ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಜಿಲ್ಲಾ ಎಸ್‌ಪಿ ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.