Home News ಆನೆಯನ್ನು ಸಂರಕ್ಷಣೆ ಮಾಡಿದ ರಾಜ್ಯದಲ್ಲಿ ಕಾಡುಹಂದಿಗಿಲ್ಲ ಬದುಕುವ ಭಾಗ್ಯ!!!ಬೆಳೆನಾಶ ಮಾಡುವ ಕಾಡುಹಂದಿಗಳ ಬೇಟೆಗೆ ಅನುಮತಿ ನೀಡಿದ...

ಆನೆಯನ್ನು ಸಂರಕ್ಷಣೆ ಮಾಡಿದ ರಾಜ್ಯದಲ್ಲಿ ಕಾಡುಹಂದಿಗಿಲ್ಲ ಬದುಕುವ ಭಾಗ್ಯ!!!ಬೆಳೆನಾಶ ಮಾಡುವ ಕಾಡುಹಂದಿಗಳ ಬೇಟೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್

Hindu neighbor gifts plot of land

Hindu neighbour gifts land to Muslim journalist

ದೇಶದ ನಾನಾ ರಾಜ್ಯಗಳಲ್ಲಿ ಅನೇಕ ತರಹದ ಕೃಷಿಗಳನ್ನು ಬೆಳೆಯುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಅದೇ ಕೃಷಿಗೆ ಕಾಡುಪ್ರಾಣಿಗಳ, ಕ್ರಿಮಿ ಕೀಟಗಳ ಹಾವಳಿ ಕೂಡಾ ತಪ್ಪಿದ್ದಲ್ಲ. ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕ ಸಿಂಪಡಿಸಿದರೆ,ಕಾಡು ಪ್ರಾಣಿಗಳಲ್ಲೊಂದಾದ ಕಾಡುಹಂದಿಯಿಂದ ಅನೇಕ ಕೃಷಿ ಚಟುವಟಿಕೆಗಳು ನಾಶವಾಗುತ್ತಿರುವುದು ಕೃಷಿಕರ ಕೋಪದ ಜೊತೆಗೆ ಬೇಸರಕ್ಕೂ ಕಾರಣವಾಗಿದೆ.

ಇಲ್ಲಿ ಕಾಡುಹಂದಿಯ ಹಾವಳಿಯನ್ನು ತಪ್ಪಿಸಲು ಬ್ರೇಕ್ ವ್ಯೆರ್ ಬಳಸಿ ಉರುಳು ಮಾಡಿ ಹಂದಿಯನ್ನೂ ಸಾಯುಸುತ್ತಿರುವುದು ಕೂಡಾ ಕಾಮನ್. ಆದರೆ ಇದು ಅಪರಾಧವಾಗಿದ್ದು, ವನ್ಯಜೀವಿ ಸಂರಕ್ಷಣೆಯ ಅಡಿಯಲ್ಲಿ ಪ್ರಕರಣ ದಾಖಲಾಗಿ ಅನೇಕರು ಜೈಲೂಟವನ್ನೂ ಸವಿದವರು ನಮ್ಮ ನಡುವೆ ಇಂದಿಗೂ ಇದ್ದಾರೆ.ಸದ್ಯ ಕೇರಳದಲ್ಲಿ ಹೊಸ ಕಾನೂನೊಂದು ಜಾರಿಯಾಗಿದ್ದು ಕಾಡುಹಂದಿಯನ್ನು ಕೊಲ್ಲುವುದು ಅಪರಾಧವಲ್ಲ ಎಂದು ಹೈಕೋರ್ಟ್ ಹೇಳಿದ್ದು, ಇನ್ನಾದರೂ ಕೃಷಿ ಉಳಿಯಬಹುದು ಎಂದು ಅಲ್ಲಿನ ಕೃಷಿಕರು ನಿಟ್ಟುಸಿರು ಬಿಡುವಂತಾಗಿದೆ.

ಹೌದು.ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 72ರ ಅಡಿಯಲ್ಲಿ ಕಾಡುಹಂದಿಗಳನ್ನು ಬೆಳೆನಾಶಕ ಎಂದು ಘೋಷಿಸಿದ ಕೊಲ್ಲಲು ಅಲ್ಲಿನ ಹೈಕೋರ್ಟ್ ಅನುಮತಿ ನೀಡಿದೆ.ಈ ಮೊದಲೊಮ್ಮೆ ಕೇರಳದ ವಲಕ್ಕುನಾಥ ದೇವಾಲಯದಲ್ಲಿ ಆನೆಗಳಿಗೆ ಮೇವು ಕಾರ್ಯಕ್ರಮ ನಡೆದು, ಆನೆಗಳ ಸಂರಕ್ಷಣೆ ಕಾರ್ಯಕ್ರಮ ಒಂದುಕಡೆಯಾದರೆ, ಇತ್ತ ಕಾಡು ಹಂದಿಗಳು ತಮ್ಮ ಉಪಟಳದಿಂದಾಗಿ ಸಾವಿಗೆ ಶರಣಾಗಬೇಕಾಗಿರುವುದು ವಿಪರ್ಯಾಸ.

ಕಾನೂನಿನ ಪ್ರಕಾರ ಕಾಡುಹಂದಿಯನ್ನು ವನ್ಯಜೀವಿ ಎಂದು ಗುರುತಿಸಲಾಗಿದ್ದರೂ, ರೈತರು ಹಂದಿಯ ಹಾವಳಿಯನ್ನು ತಡೆಯಲು ಹರಸಾಹಸ ಪಟ್ಟು ಸುಸ್ತಾಗಿ ಕೊಜಿಕ್ಕೋಡ್ ವಕೀಲ ಅಮಲ್ ದರ್ಶನ್ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯು ನ್ಯಾಯಾಲಯದಲ್ಲಿ ಪುರಸ್ಕೃತಗೊಂಡಿದ್ದು ಕಾಗೆ, ಬಾವಲಿ ಯನ್ನು ಕೊಲ್ಲುವ ರೀತಿಯಲ್ಲಿ ಇನ್ನು ಮುಂದೆ ಕಾಡುಹಂದಿಯನ್ನೂ ಕೊಲ್ಲಲು ಕೋರ್ಟ್ ನಿಂದ ಅನುಮತಿ ಸಿಕ್ಕಿದೆ.

ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ,1972ರ ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಹಾಗೂ ತಜ್ಞರ ಅಭಿಪ್ರಾಯಗಳ ಪ್ರಕಾರ ಯಾವುದೇ ವನ್ಯ ಜೀವಿಯನ್ನು ಬೇಟೆಯಾಡುವುದು ಅಪರಾಧವಲ್ಲ ಎಂಬುವುದು ಕೇಂದ್ರ ಆಡಳಿತದಿಂದಲೇ ಜಾರಿಯಾಗಬೇಕಿದೆ. ಸದ್ಯ ಕೇರಳದಲ್ಲಿ ಹೈಕೋರ್ಟ್ ಆದೇಶಿಸಿದ್ದು, ಈ ಆದೇಶದ ಮೇಲೆ ತಡೆಯಾಜ್ಞೆ ಬರುವ ಸಂಭವವೂ ಹೆಚ್ಚಿರುವ ಕಾರಣ ಸರಿಯಾದ ಆದೇಶ ಬರುವ ವರೆಗೂ ಕೃಷಿಕರು ಕಾದುನೋಡಬೇಕಾಗಿದೆ.