

ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ಹಾಡಹಗಲೇ ಯುವಕನೊಬ್ಬ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿ ವಿಚಿತ್ರವಾಗಿ ಪ್ರೀತಿ ನಿವೇದನೆ ಮಾಡುತ್ತ ಲವರ್ಸ್ ಜಾಲಿ ರೈಡ್ ಮಾಡಿದ ವಿಚಿತ್ರವಾದ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ಘಟನೆ ನಡೆದ ಎರಡೇ ಗಂಟೆಗಳಲ್ಲಿ ಸ್ಟೀಲ್ ಪ್ಲಾಂಟ್ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.













