

Anand Mahindra: ಕೈಲಾಸಪರ್ವತ ಹಿಂದೂಗಳು ಅದು ತಮ್ಮ ಪೂಜ್ಯ ಸ್ಥಳ ಎಂದು ಭಾವಿಸಿ, ಭಜಿಸುವ ಪ್ರದೇಶ. ಇದು ಶಿವನ ಆವಾಸ ಸ್ಥಾನ ಶುಭ ಇಲ್ಲಿ ನಿಂತು ನಮ್ಮೆಲ್ಲರನ್ನು ಪೋಷಿಸುತ್ತಾನೆ ಎಂಬುದು ಹಿಂದುಗಳ ನಂಬಿಕೆ. ಇದೀಗ ಇದೇ ಕೈಲಾಸ ಪರ್ವತದಲ್ಲಿ ಶಿವನು ದರ್ಶನ ಕೊಟ್ಟಿದ್ದಾನೆ ಎನ್ನಲಾದ ವಿಡಿಯೋ ಒಂದನ್ನು ಮಹಿಂದ್ರ ಗ್ರೂಪ್ಸ್ ಓನರ್ ಆನಂದ್ ಮಹೀಂದ್ರಾ(Anand Mahindra)ಹಂಚಿಕೊಂಡಿದ್ದಾರೆ
ಹೌದು, ಕೈಲಾಸ ಪರ್ವತದ ಕುರಿತು ಆರ್ಟಿಫೀಶಿಯಲ್ ಇಂಟಲಿಜೆನ್ಸ್(AI) ಮೂಲಕ ಸೃಷ್ಟಿ ಮಾಡಿದ ವಿಡಿಯೋ ಒಂದನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ ಮೌಂಟ್ ಕೈಲಾಸ, ಯಾರೂ ಹತ್ತಲಾಗದ ಪರ್ವತ, ಆದರೆ ಪ್ರತಿ ಆತ್ಮವೂ ಹಾತೊರೆಯುವ ಶಿಖರ. ನಿಮ್ಮ ಮುಖ್ಯ ಉದ್ದೇಶ ಕಂಡುಕೊಳ್ಳಲು ಇದು ಪರಿಪೂರ್ಣ ಮಾರ್ಗ ಎಂದು ಹೇಳಿಕೊಂಡಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವಾರು ಭಕ್ತರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಕೈಲಾಸ ಪರ್ವತ ಅತೀ ಎತ್ತದ ಪ್ರದೇಶ. ಇಷ್ಟೇ ಅಲ್ಲ ಶಿವನ ಧ್ಯಾನಕೇಂದ್ರ. ಹೀಗಾಗಿ ಹಿಂದೂಗಳಲ್ಲಿ ಕೈಲಾಸ ಭೂಮಿಯಲ್ಲಿರುವ ಮಾನವರಿಗೂ ಹಾಗೂ ಸ್ವರ್ಗಕ್ಕೆ ಇರುವ ದಾರಿ ಎಂದು ನಂಬಿದ್ದಾರೆ. ಹಲವು ಬೆಟ್ಟಗಳಿಂದ ಕೂಡಿರುವ ಕೈಲಾಸ ಪರ್ವತ ಎಲ್ಲಾ ಕಾಲಮಾನದಲ್ಲೂ ಹಿಮದಿಂದ ಆವೃತಗೊಂಡಿರುತ್ತದೆ. ಚಳಿಯನ್ನು ಲೆಕ್ಕಿಸದೇ ಮಹಾಶಿವ ಇಲ್ಲಿ ಧ್ಯಾನ ಮಾಡಿದ್ದ ಅನ್ನೋದ ನಂಬಿಕೆಯಾಗಿದೆ. ಈ ಪರ್ವತ ಹತ್ತುವ ರೀತಿ ಇಲ್ಲ. ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಅತೀ ಎತ್ತರದ ಪರ್ವತವನ್ನು ಹತ್ತುತ್ತಾರೆ. ಆದರೆ ಕೈಲಾಸ ಮಾತ್ರ ಹತ್ತುವ ಪ್ರಯತ್ನ ಸಾಧ್ಯವಾಗಿಲ್ಲ. ಇದರ ರಚನೆ ಈ ರೀತಿ ಇದೆ. ಇದು ಶಿವನ ಆಲಯ ಎಂದೇ ಹೆಸರಾಗಿದೆ.













