Home News Mangaluru : ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿ – ಹಿಂದೂ ಹಿತರಕ್ಷಣಾ ಸಮಿತಿ, ಹಿಂದೂ ಕಾರ್ಯಕರ್ತರ...

Mangaluru : ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿ – ಹಿಂದೂ ಹಿತರಕ್ಷಣಾ ಸಮಿತಿ, ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲು !!

Hindu neighbor gifts plot of land

Hindu neighbour gifts land to Muslim journalist

Mangaluru : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಸಾಧು ಸಂತರ ನೆರವಿಗೆ ಆಗ್ರಹಿಸಿ ದ.ಕ.ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ (ಡಿ.4) ಮಂಗಳೂರಿನಲ್ಲಿ(Mangaluru) ಪ್ರತಿಭಟನೆ ನಡೆಸಲಾಯಿತು. ಇದೀಗ ಪ್ರತಿಭಟನೆ ನಡೆಸಿದ ಹಿಂದೂ ಹಿತರಕ್ಷಣಾ ಸಮಿತಿ ಮೇಲೆ ಕೇಸ್ ಹಾಕಲಾಗಿದೆ.

ಹೌದು, ಪ್ರತಿಭಟನೆ ವೇಳೆ ರಸ್ತೆಗೆ ಇಳಿದಿದ್ದ ಹಿಂದೂ ಕಾರ್ಯಕರ್ತರು ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದರು. ರಸ್ತೆ ತಡೆ ಹಿಡಿದಿದ್ದರಿಂದ ಆಂಬುಲೆನ್ಸ್ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಬ್ಯಾರಿಕೇಡ್ ದಾಟಿ ಬಂದು ಕಾರ್ಯಕರ್ತರು ರಸ್ತೆ ತಡೆದಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರ ಜೊತೆಗೂ ಪುಂಡಾಟ ಮೆರೆದಿದ್ದರು. ಸದ್ಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾ ಆಯೋಜಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇನ್ನು ಪ್ರತಿಭಟನೆ ವೇಳೆ ಧರಣಿ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ವಾಗ್ವಾದ ಶುರುವಾಗಿದೆ. ಧರಣಿನಿರತರು ಕ್ಲಾಕ್ ಟವರ್ ಬಳಿ ಪೊಲೀಸ್ ಬ್ಯಾರಿಕೇಡ್ ಗಳನ್ನು ಬದಿಗೊತ್ತಿ ರಸ್ತೆ ತಡೆಗೆ ಮುಂದಾಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ರಸ್ತೆ ತಡೆ ಮಾಡಲು ಯತ್ನಿಸಿದವರನ್ನು ತಡೆಯಲೆತ್ನಿಸಿದರು. ಇದು ಪೊಲೀಸರು ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.

ಈ ವೇಳೆ ವರದಿಗಾರಿಕೆಗೆ ತೆರಳಿದ್ದ ಮಾಧ್ಯಮದವರ ಮೇಲೆ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿ ವರದಿಗಾರಿಕೆಗೆ ಅಡ್ಡಿಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗಳ ವಿಡಿಯೋ ಜರ್ನಲಿಸ್ಟ್ ಮೇಲೆ ಮುಗಿಬಿದ್ದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ತಳ್ಳಾಡಿದ್ದಲ್ಲದೆ, ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಗೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಾಧ್ಯಮದವರು ಧರಣಿಯ ವರದಿಗಾರಿಕೆಯನ್ನು ಬಹಿಷ್ಕರಿಸಿ ವಾಪಸ್ಸಾಗಿರುವಂತಹ ಘಟನೆ ಕೂಡ ನಡೆದಿದೆ.