Home News Amarnath yatra: ಭಾರೀ ಮಳೆಯಿಂದಾಗಿ ಇಂದು ಅಮರನಾಥ ಯಾತ್ರೆ ಸ್ಥಗಿತ – ಇಲ್ಲಿಯವರೆಗೆ 3.93 ಲಕ್ಷ...

Amarnath yatra: ಭಾರೀ ಮಳೆಯಿಂದಾಗಿ ಇಂದು ಅಮರನಾಥ ಯಾತ್ರೆ ಸ್ಥಗಿತ – ಇಲ್ಲಿಯವರೆಗೆ 3.93 ಲಕ್ಷ ಭಕ್ತರ ಭೇಟಿ

Hindu neighbor gifts plot of land

Hindu neighbour gifts land to Muslim journalist

Amarnath yatra: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬುಧವಾರ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾ‌ರ್ ವಿಧುರಿ ಅವರು ನುನ್ವಾನ್‌/ಚಂದನ್ವಾರಿ ಮತ್ತು ಬಾಲ್ಟಾಲ್ ಎರಡೂ ಮೂಲ ಶಿಬಿರಗಳಿಂದ ಇಂದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

2025 ರ ಅಮರನಾಥ ಯಾತ್ರೆಯಲ್ಲಿ ಇಲ್ಲಿಯವರೆಗೆ 3.93 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಪೂಜೆಯನ್ನು ಸಲ್ಲಿಸಿದ್ದಾರೆ ಎಂದು ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ. ಹವಾಮಾನ ಸಾಮಾನ್ಯವಾದ ತಕ್ಷಣ ಯಾತ್ರೆ ಪುನರಾರಂಭಗೊಳ್ಳಲಿದೆ ಎಂದು ಯಾತ್ರಾ ಆಡಳಿತ ಮಂಡಳಿ ತಿಳಿಸಿದೆ. ಭದ್ರತಾ ಕಾರಣಗಳಿಂದಾಗಿ ಭಕ್ತರು ತಾಳ್ಮೆಯಿಂದಿರಿ ಮತ್ತು ಅಧಿಕೃತ ಮಾಹಿತಿಗಾಗಿ ಕಾಯುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ: KSRTC: ಬಸ್‌ಗಳಲ್ಲಿ ಹೊಸ ಲಗೇಜ್ ನಿಯಮ ಜಾರಿಗೆ ತಂದಿಲ್ಲ: ಕೆ ಎಸ್ ಆರ್ ಟಿ ಸಿ ಸ್ಪಷ್ಟನೆ!