Home News Suicide: ಮೇಲಾಧಿಕಾರಿಗಳ ಕಿರುಕುಳ ಆರೋಪ; ಡಿಪೋದಲ್ಲಿ ನೇಣಿಗೆ ಶರಣಾದ ಸಾರಿಗೆ ಸಿಬ್ಬಂದಿ!

Suicide: ಮೇಲಾಧಿಕಾರಿಗಳ ಕಿರುಕುಳ ಆರೋಪ; ಡಿಪೋದಲ್ಲಿ ನೇಣಿಗೆ ಶರಣಾದ ಸಾರಿಗೆ ಸಿಬ್ಬಂದಿ!

Hindu neighbor gifts plot of land

Hindu neighbour gifts land to Muslim journalist

Belagavi: ಕೆಲಸದ ಒತ್ತಡ ಹಾಗೂ ಡ್ಯೂಟಿ ಬದಲಾವಣೆ ಮಾಡಿದ್ದಕ್ಕೆ ಮನನೊಂದ ಬಸ್‌ ಮೆಕ್ಯಾನಿಕ್‌ ಒಬ್ಬರು ಬಸ್‌ನಲ್ಲೇ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಕೆಎಸ್‌ಆರ್‌ಟಿಸಿ ಡಿಪೋ 1 ರಲ್ಲಿ ನಡೆದಿದೆ.

ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿ ಕೇಶವ ಕಮಡೊಳಿ (57) ಮೃತ ವ್ಯಕ್ತಿ.

ಇವರು ಕೆಎಸ್‌ಆರ್‌ಟಿಸಿ ಬಸ್‌ ವಾಶಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಬೆನ್ನು ನೋವಿದ್ದರೂ ಅಧಿಕಾರಿಗಳು ಪಂಚರ್‌ ಕೆಲಸಕ್ಕೆ ಬದಲಾವಣೆ ಮಾಡಲಾಗಿತ್ತು. ಕೇಶವ ಅವರು ಡ್ಯೂಟಿ ಬದಲಾಯಿಸದಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೂ ಕೆಲಸ ಬದಲಾಯಿಸದ್ದಕ್ಕೆ ಕೇಶವ್‌ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ .

ಈ ಕುರಿತು ಬೆಳಗಾವಿ ಮಾರ್ಕೆಟ್‌ ಠಾಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಪೋ ಅಧಿಕಾರಿಗಳು ಕೇಶವ್‌ ಮಾನಸಿಕ ಅಸ್ವಸ್ಥ ಎಂದು ಹೇಳಿರುವ ಕುರಿತು ವರದಿಯಾಗಿದೆ. ಆದರೆ ಮೃತನ ಕುಟುಂಬಸ್ಥರು ಅಧಿಕಾರಿಗಳ ಈ ಹೇಳಿಕೆ ಕುರಿತು ಕಿಡಿಕಾರಿದ್ದು, ಯಾವ ಆಧಾರದಲ್ಲಿ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದೀರಿ. ಹುಷಾರಿಲ್ಲ, ಡ್ಯೂಟಿ ಬದಲಿಸಬೇಡಿ ಎಂದು ಮನವಿ ಮಾಡಿದರೂ ಕೆಲಸ ಬದಲಾಯಿಸಿದ್ದೀರಿ, ಈ ಮಾನಸಿಕ ಅಸ್ವಸ್ಥ ಎಂದು ಸುಳ್ಳು ಹೇಳಿಕೆ ನೀಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.