Home News Bengaluru : ‘ಮತ ಕಳ್ಳತನ’ ಆರೋಪ – ಮಹದೇವಪುರದ 10 ಚದುರಡಿ ರೂಮಿನಲ್ಲಿ 80 ಮತದಾರರು...

Bengaluru : ‘ಮತ ಕಳ್ಳತನ’ ಆರೋಪ – ಮಹದೇವಪುರದ 10 ಚದುರಡಿ ರೂಮಿನಲ್ಲಿ 80 ಮತದಾರರು ಇರುವುದು ನಿಜವೇ?

Hindu neighbor gifts plot of land

Hindu neighbour gifts land to Muslim journalist

Bengaluru : ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಆದ್ರೆ, ಮತಗಳ್ಳತನ ವಿರುದ್ಧ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡದೇ ರಾಹುಲ್ ಗಾಂಧಿ ಹಾಗೇ ದೆಹಲಿಗೆ ಹಾರಿದ್ದಾರೆ. ಬರೀ ಬಾಯಲ್ಲೇ ಆರೋಪ ಮಾಡಿ ದೂರು ನೀಡದೇ ಹೋಗಿದ್ಯಾಕೆ ಎನ್ನುವ ಚರ್ಚೆಗಳು ಶುರುವಾಗಿವೆ.

ಹೌದು ರಾಹುಲ್ ಗಾಂಧಿಯವರು ಬೆಂಗಳೂರಿನ ಮಹಾದೇವಪುರದ ಮನೆ ಒಂದರಲ್ಲಿ ಸುಮಾರು 80 ಮಂದಿ ಮತದಾರರು ಇದ್ದಾರೆ ಎಂದು ಆರೋಪಿಸಿರುವುದು ಸದ್ಯ ಭಾರಿ ಕುತೂಹಲಕ್ಕೆ ಕಾರಣವಾದ ವಿಚಾರ. ಈ ಬೆನ್ನಲ್ಲೇ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಾನು ಪರಿಶೀಲಿಸಿರುವುದಾಗಿ ಖ್ಯಾತ ಮಾಧ್ಯಮ ಸಂಸ್ಥೆಯೊಂದು ಹೇಳಿದೆ. ಹಾಗಿದ್ರೆ ಮಹದೇವಪುರದ 10 ಚದುರಡಿ ರೂಮಿನಲ್ಲಿ 80 ಮತದಾರರು ಇರುವುದು ನಿಜವೇ? ಇಲ್ಲಿದೆ ನೋಡಿ ಡಿಟೈಲ್ಸ್

ಬೆಂಗಳೂರಿನ ಮಹದೇವಪುರದ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ನಂಬರ್ 470ರ ಮುನಿರೆಡ್ಡಿ ಗಾರ್ಡನ್ ಎಂಬ ಲೇಔಟ್ ನಲ್ಲಿರುವ ಮನೆ ಸಂಖ್ಯೆ 35ರಲ್ಲಿ ಸುಮಾರು 80 ಮತದಾರರು ಇದ್ದಾರೆಂದು ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆ ವಿಳಾಸವನ್ನು ಹುಡುಕಿಕೊಂಡು ಹೋದಾಗ ಮನೆ ನಂಬರ್ 35, ಕೇವಲ 10ರಿಂದ 15 ಚದುರಡಿ ವಿಸ್ತೀರ್ಣದ ಪುಟ್ಟ ಕೊಠಡಿಯಾಗಿದ್ದು, ಇಲ್ಲಿ 80 ಮತದಾರರು ಇರಲು ಸಾಧ್ಯವೇ ಎಂಬ ಅನುಮಾನ ಮೂಡಿಸುತ್ತದೆ.

ಅಲ್ಲಿ ಸದ್ಯಕ್ಕೆ ಪಶ್ಚಿಮ ಬಂಗಾಳದಿಂದ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ದೀಪಾಂಕರ್ ಎಂಬಾತ ವಾಸವಾಗಿದ್ದಾನೆ. ಆತನನ್ನು ಕೇಳಿದಾಗ, ಇಲ್ಲಿ ತಾನೊಬ್ಬನೇ ವಾಸವಾಗಿದ್ದು, ತಾನು ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ತಾನಿನ್ನೂ ಮತದಾರರ ಪಟ್ಟಿಗೆ ತನ್ನ ಹೆಸರನ್ನು ನೋಂದಾಯಿಸಿಲ್ಲ ಎಂದಿದ್ದಾನೆ. ಅಲ್ಲದೆ ಈ ಮನೆ ಯಾರದ್ದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆತ, ಈ ಮನೆಯು ಜಯರಾಂ ರೆಡ್ಡಿ ಎಂಬುವರಿಗೆ ಸೇರಿದ್ದು ಹಾಗೂ ಅವರು ಬಿಜೆಪಿ ಜೊತೆಗೆ ನಂಟು ಹೊಂದಿರುವ ವ್ಯಕ್ತಿ ಎಂದು ಹೇಳಿದ್ದಾನೆ.

ನಂತರ ಜಯರಾಂ ರೆಡ್ಡಿಯನ್ನು ಸಂಪರ್ಕಿಸಿದಾಗ”ನಾನು ಆ ಕೊಠಡಿಯನ್ನು ಅನೇಕ ವರ್ಷಗಳಿಂದ ಬಾಡಿಗೆ ಕೊಟ್ಟಿದ್ದೇನೆ. ಹಲವಾರು ಮಂದಿ ಅಲ್ಲಿ ಬಾಡಿಗೆಗೆ ಇದ್ದು ಆನಂತರ ಬಿಟ್ಟು ಹೋಗಿದ್ದಾರೆ. ಬಹುಶಃ ಅವರುಗಳು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸುವಾಗ ಈ ವಿಳಾಸ ಕೊಟ್ಟಿದ್ದಿರಬಹುದು. ಅವರಲ್ಲಿ ಕೆಲವುರು ಒಡಿಶಾ, ಬಿಹಾರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಿಗೆ ಅಥವಾ ಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೊರಟುಹೋಗಿದ್ದಾರೆ. ಅವರಲ್ಲಿ ಕೆಲವರು ಈಗಲೂ ಬೆಂಗಳೂರಿಗೇ ಬಂದು ಮತದಾನ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನು ಓದಿ: Viral Video : ಖ್ಯಾತ ಮಾಡೆಲ್ ಎದುರು ನಿಂತು ನಡು ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!!