Home News Gramapanchayat Service: ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ `ಗ್ರಾಮ ಪಂಚಾಯಿತಿ’ಯ ಈ ಎಲ್ಲಾ ಸೇವೆಗಳು!

Gramapanchayat Service: ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ `ಗ್ರಾಮ ಪಂಚಾಯಿತಿ’ಯ ಈ ಎಲ್ಲಾ ಸೇವೆಗಳು!

Hindu neighbor gifts plot of land

Hindu neighbour gifts land to Muslim journalist

Gramapanchayat Service: ಮೊದಲೆಲ್ಲಾ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಇನ್ಮುಂದೆ ಯಾವುದೇ ಸೌಲಭ್ಯ ಸೇವೆ ಪಡೆಯಲು ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು.
ವಾಟ್ಸ್ ಆಪ್ ಮೂಲಕವೇ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.

ನೀವು 8277506000 ಸಂಖ್ಯೆಗೆ ವಾಟ್ಸಾಪ್‌ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್‌ ಚಾಟ್‌ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.

“ಪಂಚಮಿತ್ರ” ಪೋರ್ಟಲ್ ಮೂಲಕ ಈ ಕೆಳಗಿನ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ.

1. ಚುನಾಯಿತ ಪ್ರತಿನಿಧಿಗಳ ವಿವರಗಳು
2. ಸಿಬ್ಬಂದಿಗಳ ವಿವರಗಳು
3. ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು
4. ಗ್ರಾಮ ಪಂಚಾಯತ್ಗಳ ಮುಂಬರುವ ಸಭೆಗಳ ಮಾಹಿತಿ
5. ಆದಾಯ ಸಂಗ್ರಹ ವಿವರಗಳು
6. ಸೇವೆಗಳ ವಿವರಗಳು
7. ಸ್ವ ಸಹಾಯ ಗುಂಪಿನ ವಿವರಗಳು
8. ಗ್ರಾಮ ಪಂಚಾಯತ್ಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು
9. 4 (1) (a) & 4 (1) (b) RTI ದಾಖಲೆಗಳು

ಈ ಕೆಳಗಿನ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ.

1. ವ್ಯಾಪಾರ ಪರವಾನಗಿ
2. ಹೊಸ ನೀರು ಸರಬರಾಜು ಸಂಪರ್ಕ
3. ನೀರು ಸರಬರಾಜಿನ ಸಂಪರ್ಕ ಕಡಿತ
4. ಕುಡಿಯುವ ನೀರಿನ ನಿರ್ವಹಣೆ
5. ಬೀದಿ ದೀಪದ ನಿರ್ವಹಣೆ
6. ಗ್ರಾಮ ನೈರ್ಮಲ್ಯದ ನಿರ್ವಹಣೆ
7. ಕಟ್ಟಡ ನಿರ್ಮಾಣ ಲೈಸೆನ್ಸ್
8. ಸ್ವಾಧೀನ ಪ್ರಮಾಣಪತ್ರ
9. ರಸ್ತೆ ಅಗೆವುದಾಕ್ಕಾಗಿ ಅನುಮತಿ
10. ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
11. ನಮೂನೆ 11ಬಿ
12. MGNREGA ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
13. ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
14. ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿಸುವಿಕೆ
15. ಹೊಸ/ಅಸ್ತಿತ್ವದಲ್ಲಿರುವ ಓವರ್ಗ್ರೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ/ನಿಯಮಿತಗೊಳಿಸುವಿಕೆ
16. ನಮೂನೆ 9/11ಎ
17. ನಿರಾಕ್ಷೇಪಣಾ ಪತ್ರ NOC
ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಈ ಕೆಳಗಿನ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದುಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.