Home News UP: ಅಖಿಲೇಶ್‌ ಪತ್ನಿ ಡಿಂಪಲ್‌ ಬೆತ್ತಲೆಯಾಗಿ ಮಸೀದಿಗೆ ಬಂದಿದ್ರು- ಇಮಾಮ್‌ ರಶೀದಿ ಹೇಳಿಕೆ

UP: ಅಖಿಲೇಶ್‌ ಪತ್ನಿ ಡಿಂಪಲ್‌ ಬೆತ್ತಲೆಯಾಗಿ ಮಸೀದಿಗೆ ಬಂದಿದ್ರು- ಇಮಾಮ್‌ ರಶೀದಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

UP: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ರ ಪತ್ನಿ ಹಾಗೂ ಸಂಸದೆ ಡಿಂಪಲ್‌ ಯಾದವ್‌ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಟೀವಿ ಚಾನೆಲ್‌ನಲ್ಲಿ ಮಾತನಾಡಿದ ರಶೀದ್‌, ‘ಮಸೀದಿಯಲ್ಲಿದ್ದ ಇನ್ನೊಬ್ಬ ಸಂಸದೆ ಇಕ್ರಾ ಹಸನ್‌ ಅವರು ತಲೆ ಸೇರಿದಂತೆ ಇಡೀ ಮೈ ಮುಚ್ಚುವಂತೆ ಬಟ್ಟೆ ತೊಟ್ಟಿದ್ದರು. ಆದರೆ ಡಿಂಪಲ್‌ ಬೆತ್ತಲೆಯಾಗಿದ್ದರು’ ಎಂದು ಹೇಳಿದ್ದರು. ಇದೀಗ ರಶೀದ್‌ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಅಂದಹಾಗೆ ಜು.26ರಂದು ಮಸೀದಿಗೆ ಹೋಗಿದ್ದ ಡಿಂಪಲ್‌ ಸೀರೆ ಮಾತ್ರ ಉಟ್ಟಿದ್ದರು. ಬುರ್ಖಾ ಧರಿಸಿರಲಿಲ್ಲ. ಇದರಿಂದಾಗಿ ಅವರ ಬೆನ್ನು ಕೊಂಚ ಕಾಣುತ್ತಿತ್ತು. ಅದನ್ನೇ ಬೆತ್ತಲೆ ಎಂದು ರಶೀದ್ ಅವರು ಹೇಳುತ್ತಿದ್ದಾರೆ ಎಂದು ಡಿಂಪಲ್ ಆರೋಪ ಮಾಡಿದ್ದಾರೆ.

ಸಧ್ಯ ರಶೀದ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 79(ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಆಡಿದ ಮಾತು, ಸನ್ನೆ ಅಥವಾ ಕೃತ್ಯ), 196(ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 197(ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಆರೋಪಗಳು, ಪ್ರತಿಪಾದನೆಗಳು), ಐಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Transport Workers: ಇಂದಿನಿಂದ ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ