Home News ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ | ಕಾರ್ಕಳದ ನಾಲ್ವರ ದುರ್ಮರಣ ,ಐವರಿಗೆ ಗಂಭೀರ ಗಾಯ

ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ | ಕಾರ್ಕಳದ ನಾಲ್ವರ ದುರ್ಮರಣ ,ಐವರಿಗೆ ಗಂಭೀರ ಗಾಯ

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ : ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಈಚರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಆಗುಂಬೆ ಘಾಟಿಯ 5ನೇ ತಿರುವಿನ ರಸ್ತೆ ತಡೆಗೋಡೆ ಬಡಿದು ಸುಮಾರು ನೂರು ಅಡಿ ಆಳದ ಕಂದಕಕ್ಕೆ ಬಿದ್ದು,ಕಾರ್ಕಳದ ನಾಲ್ವರು ಮೃತಪಟ್ಟು,ಐವರು ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಲಾರಿಯಲ್ಲಿ ಚಾಲಕ ಸಹಿತ ಒಟ್ಟು 9ಜನ ಇದ್ದರೆಂದು ತಿಳಿದುಬಂದಿದೆ. 4 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಉಳಿದ ಐವರಿಗೆ ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿದ್ದು. ಅಗ್ನಿಶಾಮಕ ದಳದ ಅವರೊಂದಿಗೆ ಮೃತದೇಹಗಳನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ. ಮೃತರು ಕಾರ್ಕಳದ ಮಿಯ್ಯಾರಿನವರು ಎನ್ನಲಾಗಿದೆ.