Home News Sandalwood: ಚಂದನ್ ಶೆಟ್ಟಿ ಜೊತೆ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ- ಸದ್ದಿಲ್ಲದೆ ಎಂಗೇಜ್ ಆದ ಜೋಡಿ

Sandalwood: ಚಂದನ್ ಶೆಟ್ಟಿ ಜೊತೆ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ- ಸದ್ದಿಲ್ಲದೆ ಎಂಗೇಜ್ ಆದ ಜೋಡಿ

Hindu neighbor gifts plot of land

Hindu neighbour gifts land to Muslim journalist

Sandalwood: ಕನ್ನಡ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಸದ್ದಿಲ್ಲದೇ ದಿಢೀರ್ ಚಂದನ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ !! ಹೌದು, ಮಾರ್ಚ್‌ ತಿಂಗಳಲ್ಲೇ ನಟಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಚಂದನ್ ಶೆಟ್ಟಿ ಎಂಬುವವರ ಜೊತೆ ಮದುವೆ ಆಗುತ್ತಿದ್ದಾರಂತೆ. ಈ ಬಗ್ಗೆ ನಟಿ ಸುಪ್ರೀತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮಾಹಿತಿಯನ್ನ ತಡವಾಗಿ ಹಂಚಿಕೊಂಡಿದ್ದಾರೆ.

ಹಾಗಂತ ಇದು ರ್ಯಾಪ್ ಸಿಂಗರ್, ನಿವೇದಿತಾ ಗೌಡ ಅವರ ಮಾಜಿ ಪತಿ ಚಂದನ್ ಶೆಟ್ಟಿ ಅಲ್ಲ. ಚಂದನ್ ಶೆಟ್ಟಿ ಎಂದರೆ ಎಲ್ಲರಿಗೂ ನೆನಪಾಗುವುದು ಅವರು ಒಬ್ಬರೇ. ಆದರೆ ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ ಆಗ್ತಿರುವ ಚಂದನ್ ಶೆಟ್ಟಿ ಒಬ್ರು ಡಿಜಿಟಲ್ ಕ್ರಿಯೇಟರ್. ತನ್ನ ಬಾವಿಪತಿ ಡಿಜಿಟಲ್ ಕ್ರಿಯೇಟರ್ ಅಂತಾ ನಟಿ ಸುಪ್ರೀತಾ ಅವರು ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದಾರೆ. ಈ ಮೂಲಕ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಭರ್ಜರಿಯಾಗಿ ಮದುವೆ ಆಗೋದಕ್ಕೆ ಸಿದ್ಧವಾಗಿದ್ದಾರೆ.

ಇನ್ನು ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಪ್ರೀತಾ ಅವರು ಹೊಸ ಚಾಪ್ಟರ್‌ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ತುಂಬ ಇಷ್ಟ. ಆ ನಗುವಿಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್‌ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್‌ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್‌ ಯು ಕಂದ. ನನ್ನ ಹೃದಯ ನಿನ್ನದು ಎಂದು ಬರೆದುಕೊಂಡಿದ್ದಾರೆ.

ಇನ್ನು ಸುಪ್ರೀತ ಅವರು ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಸಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದರು. ಸೀತಾ ವಲ್ಲಭ ಧಾರಾವಾಹಿಯಲ್ಲಿ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು