Home News Actress Sanjana Galrani: ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣ; ರಾಹುಲ್‌ ತೋನ್ಸೆಗೆ 61 ಲಕ್ಷ...

Actress Sanjana Galrani: ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣ; ರಾಹುಲ್‌ ತೋನ್ಸೆಗೆ 61 ಲಕ್ಷ ದಂಡ, 6 ತಿಂಗಳು ಜೈಲು!

Hindu neighbor gifts plot of land

Hindu neighbour gifts land to Muslim journalist

Actress Sanjana Galrani: ನಟಿ ಸಂಜನಾ ಗಲ್ರಾನಿ ಅವರಿಗೆ ಹಣ ವಂಚನೆ ಮಾಡಿದ ಪ್ರಕರಣದ ಅಪರಾಧಿ ರಾಹುಲ್‌ ತೋನ್ಸೆಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ.

2018-19ರಲ್ಲಿ ಸಂಜನಾ ಗಲ್ರಾನಿ ಅವರಿಂದ ರಾಹುಲ್‌ ತೋನ್ಸೆ 45 ಲಕ್ಷ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಇದಾಗಿದೆ. ಸಂಜನಾ ಸ್ನೇಹಿತ ರಾಹುಲ್‌ ತೋನ್ಸೆ, ತಾನು ಗೋವಾ, ಕೊಲಂಬೋ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ನಾನು ಹೇಳಿದ ಕಡೆ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎನ್ನುವ ಆಮಿಷವೊಡ್ಡಿದ್ದ. ಇದನ್ನು ನಂಬಿ ನಟಿ ಸಂಜನಾ ಹಣ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸಿಕೊಡಲಿಲ್ಲ. ನಂತರ ನಾನು ಹಣಕ್ಕೆ ಒತ್ತಾಯ ಮಾಡಿದಾಗ ರಾಹುಲ್‌ ನೀಡಲಿಲ್ಲ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿತ್ತು.

ಸದ್ಯ ಆರೋಪಿ ರಾಹುಲ್‌ ತನ್ನ ಕುಟುಂಬ ಸಮೇತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.