Home News Rashmika mandanna: ಹೊಸ ಪರ್ಪ್ಯೂಮ್ ಬ್ರಾಂಡ್ ಆರಂಭಿಸಿದ ನಟಿ ರಶ್ಮಿಕಾ!

Rashmika mandanna: ಹೊಸ ಪರ್ಪ್ಯೂಮ್ ಬ್ರಾಂಡ್ ಆರಂಭಿಸಿದ ನಟಿ ರಶ್ಮಿಕಾ!

Hindu neighbor gifts plot of land

Hindu neighbour gifts land to Muslim journalist

Rashmika mandanna: ಸಲೆಬ್ರಿಟಿಗಳು (Celebrities) ಸಿನಿಮಾಗಳ (Film) ಜೊತೆಗೆ ತಮ್ಮದೇ ಉದ್ಯಮ ಪ್ರಾರಂಭ ಮಾಡುವುದು ಬಹಳ ಸಾಮಾನ್ಯ ಇದೀಗ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಪರ್ಪ್ಯೂಮ್ ಬ್ರಾಂಡ್‌ ಆರಂಭಿಸಿದ್ದಾರೆ.

ರಶ್ಮಿಕಾ ತಮ್ಮ’ಡಿಯರ್ ಡೈರಿ ಬೈ ರಶ್ಮಿಕಾ ಮಂದಣ್ಣ’ ಎನ್ನುವ ಬ್ಯಾಂಡ್ ಅನ್ನು ಆರಂಭ ಮಾಡಿರುವುದಾಗಿ ಇನ್ನಾಗ್ರಾಮ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಂಚಿಕೊಂಡಿರುವ ನಟಿ, ಇದು ನಿಜವಾಗಿಯೂ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಇದು ಕೇವಲ ಒಂದು ಬ್ರಾಂಡ್ ಅಲ್ಲ. ಕೇವಲ ಸುಗಂಧ ದ್ರವ್ಯವಲ್ಲ. ಇದು ನನ್ನ ಒಂದು ಜೀವನದ ಭಾಗ. ಪರ್ಫೂಮ್ ಯಾವಾಗಲೂ ನನ್ನ ವೈಯಕ್ತಿಕ ಜೀವನದ ಪ್ರಮುಖ ಭಾಗವಾಗಿದೆ. ಇಂದು ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾನು ಇದನ್ನು ಮಾಡಲು ಸಾಧ್ಯವಾಗಿದ್ದು ನಿಮ್ಮಿಂದ ಹಾಗಾಗಿ ನಿಮಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ತುಂಬಾ ಉತ್ಸುಕಳಾಗಿದ್ದೇನೆ ಆದರೆ ತುಂಬಾ ನರ್ವಸ್ ಆಗಿದ್ದೇನೆ. ಆದರೆ ಇದನ್ನು ಮುಂದುವರಿಸಲು ನಿಮ್ಮೆಲ್ಲರ ಆಶೀರ್ವಾದ ನನಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಇದನ್ನು ನನ್ನಂತೆಯೇ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chain snatch: ಹಾಡು ಹಗಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಸರ ಅಪಹರಣ – ಕಳ್ಳನನ್ನು ಪತ್ತೆ ಹಚ್ಚಿ ಧರ್ಮದೇಟು ನೀಡಿದ ಗ್ರಾಮಸ್ಥರು