Home News Anushka Shetty: ಮಧೂರು ದೇವಸ್ಥಾನದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ!

Anushka Shetty: ಮಧೂರು ದೇವಸ್ಥಾನದಲ್ಲಿ ನಟಿ ಅನುಷ್ಕಾ ಶೆಟ್ಟಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗ!

Hindu neighbor gifts plot of land

Hindu neighbour gifts land to Muslim journalist

Anushka Shetty: ಕೇರಳದ ಅತ್ಯಂತ ಪುರಾತನ ಕ್ಷೇತ್ರವಾದ ಮಧೂರು ಗಣಪತಿ ಕ್ಷೇತ್ರವೂ ಒಂದು. ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಮಾ.27 ರಿಂದ ಎಪ್ರಿಲ್‌ 7 ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮತ್ತು ಮೂಡಪ್ಪ ಸೇವೆ ಅದ್ಧೂರಿಯಾಗಿ ನಡೆಯುತ್ತಿದೆ.

ಖ್ಯಾತ ಚಿತ್ರನಟಿ ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆ ಮಾಡಿಸಿದ್ದು, 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮಾಡಿಸಿದ್ದು, ನಟಿ ಇದರಲ್ಲಿ ಭಾಗಿಯಾಗಿಲ್ಲ. ಕ್ಷೇತ್ರಕ್ಕೆ ಬರಲು ಆಗದ ಕಾರಣ ತನ್ನ ಹೆಸರಿನಲ್ಲಿ ಸೇವೆ ಮಾಡಿಸಿದ್ದಾರೆ.

ಅಷ್ಟ ದ್ರವ್ಯ ಗಣಪತಿ ಹೋಮ ಮಾಡುವುದು ಯಾಕೆ? 

ಗಣಪತಿಯ ಆಶೀರ್ವಾದ ಮತ್ತು ರಕ್ಷಣೆಗಾಗಿ ಹಲವು ಹೋಮಗಳನ್ನು ಮಾಡಲಾಗುತ್ತದೆ. ಅದರಲ್ಲಿ ಅಷ್ಟ ದ್ರವ್ಯ ಗಣಪತಿ ಹೋಮ ಕೂಡ ಒಂದಾಗಿದೆ. ಸಂಪತ್ತು, ಹಣಕಾಸು, ವ್ಯಾಪಾರ ಮತ್ತು ವೃತ್ತಿ ಜೀವನ ಸುಧಾರಣೆ ಮತ್ತು ಅಭಿವೃದ್ಧಿಗೆ ಈ ಹೋಮವನ್ನು ಮಾಡಲಾಗುತ್ತದೆ. ವಿವಾಹ ವಿಳಂಬ ಮತ್ತು ಸೂಕ್ತ ಜೀವನ ಸಂಗಾತಿಯನ್ನು ತ್ವರಿತವಾಗಿ ಹುಡುಕಲು ಕೂಡ ಈ ಯಾಗವನ್ನು ಮಾಡಲಾಗುತ್ತದೆ.