

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಫಿಲ್ಮ್ “ಕೊರಗಜ್ಜ” ಚಿತ್ರತಂಡ ಪ್ರಮೋಷನ್ ಸಲುವಾಗಿ ಕೊಚ್ಚಿಯ “ಹಾಲಿಡೇ ಇನ್” ಪಂಚತಾರ ಹೊಟೆಲ್ ನ ‘ಗ್ರ್ಯಾಂಡ್ ಬಾಲ್ ರೂಮಿ’ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ದೂರಿ ಪತ್ರಿಕಾಗೋಷ್ಠಿ ಹಾಗೂ ಭೊಜನಕೂಟ ಆಯೋಜಿಸಲಾಗಿತ್ತು. ಸುಮಾರು ಒಂದುವಾರಗಳ ಮೊದಲೇ ಕೊಚ್ಚಿಯ ಪಿ ಆರ್ ಒ ಮುಖಾಂತರ ಎಲ್ಲಾ ಮಾಧ್ಯಮಗಳಿಗೆ ಪತ್ರಿಕಾ ಗೋಷ್ಟಿಯ ಆಮಂತ್ರಣ ಕೂಡಾ ರವಾನೆಯಾಗಿತ್ತು.
ಆದರೆ ಪ್ರೆಸ್ ಮೀಟ್ ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಪಿಆರ್ ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ “ಛಾತಪಾಚ”ಮಲಯಾಳಂ ಚಿತ್ರತಂಡವು ದಿಡೀರ್ ಆಗಿ ತಿಳಿಸಿದ್ದಾರೆ ಎಂದರು. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ದೂರಿ ಪತ್ರಿಕಾಗೋಷ್ಟಿ ನಡೆಸಲು ತಯಾರಿನಡೆಸಿದ್ದ ‘ಕೊರಗಜ್ಜ’ ಚಿತ್ರ ತಂಡಕ್ಕೆ ಆಘಾತವಾಯಿತು.
ಈ ಬಗ್ಗೆ ಕಾರಣ ಕೇಳಿದಾಗ ಮಮುಟ್ಟಿ ಅಭಿನಯಿಸಿದ್ದ ಈ ಮಲಯಾಳಂ ಚಿತ್ರದ ಪ್ರಮೋಷನನ್ನು “ಕೊರಗಜ್ಜ” ಚಿತ್ರದ ಪ್ರಮೋಷನ್ ಸಮಯದಲ್ಲೇ ಜನವರಿ 24ರಂದೇ ರಾತ್ರಿ 8ಗಂಟೆಗೆ ನಡೆಸಲು ಅಂತಿಮ ಕ್ಷಣದಲ್ಲಿ ತೀರ್ಮಾನಿಸಿರುವುದರಿಂದ ಮತ್ತು ಮಮುಟ್ಟಿ ಯವರು ಈ ಕಾರ್ಯಕ್ರಮಕ್ಕೆ ಹಾಜರಾಗುವುದರಿಂದ ಕನ್ನಡ ಬೇಸ್ ಪ್ಯಾನ್ ಇಂಡಿಯಾ ಚಿತ್ರ “ಕೊರಗಜ್ಜ” ಗೆ ಜರ್ನಲಿಸ್ಟ್ ಗಳು ಹಾಜರಾಗುವುದು ಅಸಂಭವ. ಆದ್ದರಿಂದ ಪ್ರೆಸ್ಸ್ ಮೀಟ್ ರದ್ದುಗೊಳಿಸುವುದು ಉತ್ತಮ ಎಂಬ ಸಲಹೆ ಬಂತು.
ಮಾರನೆಯ ದಿನದ “ಕೊರಗಜ್ಜ” ಚಿತ್ರದ ಪತ್ರಿಕಾಗೋಷ್ಟಿಗೆ ಕಬೀರ್ ಬೇಡಿ ಆದಿಯಾಗಿ ಹಲವರು ಆಗಲೇ ಆಗಮಿಸಿರುವುದರಿಂದ ಮತ್ತು ಹಾಲಿಡೇ ಇನ್ ಹೊಟೆಲ್ ಗೆ ಮರುದಿನದ ಡಿನ್ನರ್ ಮತ್ತು ಐಷಾರಾಮಿ ರೂಂ ಗಳಿಗೆ ಲಕ್ಷಾಂತರ ಹಣ ಪಾವತಿಸಿರುವುದರಿಂದ ಪತ್ರಿಕಾ ಗೋಷ್ಟಿಯನ್ನು ಮುಂದೂಡುವುದರಿಂದಾಗಲೀ , ರದ್ದು ಗೊಳಿಸುವುದರಿಂದಾಗಲೀ ಚಿತ್ರದ ನಿರ್ಮಾಪಕರಿಗೆ ಲಕ್ಷಾಂತರ ರುಪಾಯಿ ನಷ್ಟ ವಾಗುವ ಸಂಕಟ ಎದುರಾಯ್ತು.ಆದರೆ ಮಮ್ಮುಟ್ಟಿಯಂತಹ ನಟನ ಮತ್ತು ಅವರ ತಂಡದ ಏಕಸ್ವಾಮ್ಯದಿಂದಾಗಿ ಯಾರೊಂದಿಗೂ ತಮ್ಮ ಸಂಕಟವನ್ನು ಹೇಳಿಕೊಳ್ಳದ ಪರಿಸ್ಥಿತಿ “ಕೊರಗಜ್ಜ” ಚಿತ್ರ ತಂಡಕ್ಕೆ ಎದುರಾಯ್ತು.
ಮುಂಬಾಯಿ,ಬೆಂಗಳೂರು,ಹೈದರಾಬಾದ್ ರೀತಿಯ ಮಹಾನಗರಗಳಲ್ಲಿ ಇರುವಹಾಗೆ ಮೂರ್ನಾಲ್ಕು ಜರ್ನಲಿಸ್ಟ್ ಗಳು ಸಿನಿಮಾ ವಿಭಾಗವನ್ನು ಪ್ರತಿನಿಧಿಸುವುದಿಲ್ಲ. ಕೊಚ್ಚಿ ಯಂತಹ ಸಣ್ಣ ನಗರಗಳಲ್ಲಿ ಫಿಲ್ಮ್ ಮತ್ತು ಸ್ಪೋರ್ಟ್ಸ್ ಸೆಕ್ಷನ್ ಗೆ ಒಬ್ಬೊಬ್ಬರೇ ಮಾಧ್ಯಮ ಪ್ರತಿನಿಧಿಗಳಿರುತ್ತಾರೆ. ಆದ್ದರಿಂದ ಸಿನಿಮಾಗೆ ಸಂಬಂಧ ಪಟ್ಟ ಎರಡೆರಡು ಪ್ರೆಸ್ಸ್ ಮೀಟ್ ಗಳನ್ನಾಗಲೀ, ಕಾರ್ಯಕ್ರಮಗಳನ್ನಾಗಲೀ ಏಕಕಾಲದಲ್ಲಿ ಏರ್ಪಡಿಸುವುದಿಲ್ಲ.
ಪಿ ಆರ್ ಒ ಗಳೊಂದಿಗೆ ಚರ್ಚಿಸಿ, ಬೇರೆ ಬೇರೆ ಸಮಯಗಳಲ್ಲಿ ಮತ್ತೊಂದು ಸಿನೆಮಾದ ಪ್ರಮೋಷನ್ ಗೆ ತೊಂದರೆ ಆಗದ ರೀತಿಯಲ್ಲಿ ಆಯೋಜಿಸುತ್ತಾರೆ. ಇದು ಇಂಡಸ್ಟ್ರಿಯ ಬೆಳವಣಿಗೆಗೆ ಮಾನವೀಯತೆಯ ಮತ್ತು ನೈತಿಕತೆಯ ದ್ರಷ್ಟಿಯಿಂದ ದಕ್ಷಿಣಭಾರತದ ಸಿನಿಮಾ ರಂಗದಲ್ಲಿ ಒಂದು ಭಾಷೆಯ ನಿರ್ಮಾಪಕ ಮತ್ತೊಂದು ಭಾಷೆಯ ನಿರ್ಮಾಪಕನಿಗೆ ಸಹಕರಿಸುವ ರೀತಿ. ಆದರೆ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದ ಮಲಯಾಳಂ ಸುಪರ್ ಸ್ಟಾರ್ ಎನಿಸಿಕೊಂಡ ಮಮುಟ್ಟಿ ಯಂತಹ ನಟ ಮತ್ತು ಅವರ ಚಿತ್ರ ತಂಡ ಈರೀತಿಯ ವರ್ತನೆತೋರಿಸಿದ್ದು, ನಮಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ಕೊರಗಜ್ಜ ಚಿತ್ರತಂಡ ಅಳಲು ತೋಡಿಕೊಂಡಿದ್ದಾರೆ.
ತಾನು ಪ್ರಮೋಷನ್ ನಲ್ಲಿ ಭಾಗವಹಿಸಿದರೆ ಮುಖ್ಯ ವಾಹಿನಿಗಳ ಮತ್ತು ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳೆಲ್ಲರೂ ಸೇರುತ್ತಾರೆ ಎಂಬ ವಿಚಾರ ಮಮುಟ್ಟಿಯಂತಹ ನಟರಿಗೆ ಖಂಡಿತಾ ತಿಳಿದಿರುತ್ತದೆ. ಹಾಗಿರುವಾಗ ಅದೇ ಸಮಯದಲ್ಲಿ ಪೂರ್ವಭಾವಿಯಾಗಿ ಯಾವುದಾದರೂ ಸಿನಿಮಾದ ಪ್ರಮೋಷನ್ ನಿರ್ಧಾರವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾಗಿರುವುದು ನೈತಿಕತೆ.
ತಮಗೆ ಪವರ್ ಇದೆ, ತಾವು ಹೇಳಿದರೆ ಎಲ್ಲರೂ ನಮ್ಮ ಮಾತುಕೇಳುತ್ತಾರೆ ಎಂಬ ಮನೋಭಾವದಿಂದ ಸಡನ್ ಆಗಿ ತಮ್ಮ ಚಿತ್ರದ ಪ್ರಮೋಷನ್ ಏರ್ಪಡಿಸಿ, ಬೇರೆ ಚಿತ್ರಗಳಿಗೆ ತೊಂದರೆ ಕೊಡುವ ರೀತಿಯಲ್ಲಿ, ಮೊದಲೇ ನಿಗದಿಯಾಗಿದ್ದ ಪತ್ರಿಕಾಗೋಷ್ಟಿಯನ್ನು ರದ್ದು ಪಡಿಸುವ ನಿರ್ದಾಕ್ಷಿಣ್ಯ ಧೋರಣೆ ತೋರಿಸುವುದು ಒಳ್ಳೆ ಬೆಳವಣಿಗೆಯೇ? ಎಂದು ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ಪ್ರಶ್ನಿಸಿದ್ದಾರೆ. ಅಲ್ಲದೆ ಕೊರಗಜ್ಜ ಚಿತ್ರದಲ್ಲಿ ಗೋಪಿಸುಂದರ್ ಸಮೇತ ಹೆಚ್ಚು ಕಡಿಮೆ ಮಲಯಾಳಂ ತಂತ್ರಜ್ನ್ಯರು ಮತ್ತು ಗಾಯಕರು ಕೆಲಸ ಮಾಡಿದ್ದಾರೆ. ಹಾಗಿದ್ದೂ ಈ ರೀತಿ ತೊಂದರೆ ನೀಡಿದ್ದಾರೆ.
ಮಲಯಾಳಂ ಚಿತ್ರಗಗಳ ಪ್ರಮೋಷನ್ ಬೆಂಗಳೂರಿನಲ್ಲೂ ನಡೆಸುತ್ತಾರೆ. ಆಗ ಕನ್ನಡದ ಮಾಧ್ಯಮದವರು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ.ಲಕ್ಷಾಂತರ ಕನ್ನಡಿಗರು ಮಲಯಾಳಂ ಚಿತ್ರಗಳನ್ನು ಪ್ರೋತ್ಸಾಹಿಸಿರುತ್ತಾರೆ. ಆದರೆ ಈರೀತಿಯಾಗಿ ಕನ್ನಡ ಬೇಸ್ ಪ್ಯಾನ್ ಇಂಡಿಯಾ ಚಿತ್ರದ ಪ್ರಮೋಷನ್ ಗೆ ಅಡ್ಡಿ ಪಡಿಸಿರುವುದು ಭಾಷಾವಾರು ವೈಷಮ್ಯವನ್ನು ಹುಟ್ಟುಹಾಕಬಹುದು ಎಂದು ಅತ್ತಾವರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಾನು ಮಲಯಾಳಂ ಭಾಷೆಯ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ದೇಶದ ಸುಮಾರು 25% ರಾಷ್ಟ ಪ್ರಶಸ್ತಿಗಳನ್ನು ಮಲಯಾಳಂ ಭಾಷೆಪಡೆದುಕೊಂಡಿದೆ. ಮಲಯಾಳಂ ಭಾಷೆಯ ಮೇಲಿನಿ ಗೌರವದಿಂದಲೇ ಕೊರಗಜ್ಜ” ಚಿತ್ರದ ಪ್ರಮೋಷ ನ್ ಗೆ ಕೊಚ್ಚಿಗೆ ಬಂದಿದ್ದೇನೆ.ಆದರೆ ಈ ಘಟನೆ ಮೋಸ್ಟ್ ಅನ್ಫಾರ್ಚುನೇಟ್ ಎಂದು ಕಬೀರ್ ಬೇಡಿ ಹೇಳಿ,ಮಮ್ಮುಟ್ಟಿಗೆ ಈ ವಿಚಾರತಿಳಿಯದೆ ಮಾಡಿರಬಹುದು. ಆದರೆ ಕೇವಲ ಒಂದು ದಿನ ಮುಂಚಿತವಾಗಿ ನಿಗದಿಯಾಗಿದ್ದ ಪ್ರೆಸ್ಸ್ ಮೀಟ್ ಗೆ ತೊಂದರೆ ನೀಡಿದ್ದು ಸರಿಎನಿಸುವುದಿಲ್ಲ. ಸಡನ್ ಆಗಿ ಕಾರ್ಯಕ್ರಮ ನಡೆಸುವ ಮುಂಚೆ ಮಾಧ್ಯಮದವರೊಂದಿಗಾಗಲೀ, ಪಿ ಆರ್ ಒ ಗಳೊಂದಿಗಾಗಲೀ, ಅದೇ ಸಮಯದಲ್ಲಿ ಮಾಧ್ಯಮ ಪ್ರತಿನಿದಿಗಳು ಸೇರುವಂತಹ ಬೇರೆ ಕಾರ್ಯಕ್ರಮ ಇದೆಯೇ ಎಂದು ಪರೀಕ್ಷಿಸಬೇಕಿತ್ತು- ಎಂದು ಕಬೀರ್ ಬೇಡಿ ತನ್ನ ಬೇಸರ ವ್ಯಕ್ತ ಪಡಿಸಿದ್ದಾರೆ.
ನಮ್ಮ “ಕೊರಗಜ್ಜ” ಚಿತ್ರದ ಪ್ರಮೋಷನ್ ನ ಪತ್ರಿಕಾಗೋಷ್ಟಿಗೆ ಆಗಮಿಸಿದ್ದ ಹಾಲಿವುಡ್-ಬಾಲಿವುಡ್ ಚಿತ್ರಗಳ ಅಂತಾರಾಷ್ಟ್ರೀಯ ಖ್ಯಾತಿಯ ಕಬೀರ್ ಬೇಡಿಯಂತಹ ಹಿರಿಯ ನಟನಿಗೆ ಮಮುಟ್ಟಿಯಂತಹ ನಟರು ಮಾಡಿದ ಅವಮಾನದಂತಿತ್ತು ಈ ಬೆಳವಣಿಗೆ. ಮಮುಟ್ಟಿಯವರು ತನ್ನ ಚಿತ್ರದ ಪ್ರಮೋಷನ್ ಮಾಡುವುದು ತಪ್ಪೇನೂ ಅಲ್ಲ. ಆದರೆ ಕಬೀರ್ ಬೇಡಿಯಂತಹ ಅತ್ಯಂತ ಗೌರವಾನ್ವಿತ ಹಿರಿಯ ನಟ ಪತ್ರಿಕಾಗೋಷ್ಟಿಗೆ ಹಾಜರಾಗುವ ವಿಚಾರವನ್ನು ಸುಮಾರು ಒಂದುವಾರಗಳಷ್ಟು ಹಿಂದೆಯೇ ಎಲ್ಲಾ ಮಲಯಾಳಂ ಮಾದ್ಯಮಕ್ಕೆ ಆಮಂತ್ರಣ ಮುಖಾಂತರ ತಿಳಿಸಿ ಆಗಿತ್ತು.ಆದರೂ ಈ ರೀತಿಯ ದಬ್ಬಾಳಿಕೆ ಮಾಡಿ, ಕಬೀರ್ ಬೇಡಿಯಂತಹ ರಾಷ್ಟ್ರ-ಅಂತರ್ ರಾಷ್ಟ್ರೀಯ ಮನ್ನಣೆಯ ಅತ್ಯಂತ ಗೌರವಾನ್ವಿತ ನಟನಿಗೆ ಅವಮಾನ ಮಾಡಿರುವುದು ಒಪ್ಪುವಂತಹ ವಿಚಾರವಲ್ಲ ಎಂದು ಹಿರಿಯ ನಟಿ ಭವ್ಯ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ನಾವು ಮಂಗಳೂರಿನಲ್ಲಿ ನಡೆಸಿದ್ದ ಚಿತ್ರದ ಆಡಿಯೋ ಲಾಂಚ್ ಸಮಾರಂಭಕ್ಕೆ ದೇಶಾದ್ಯಂತ ಸುಮಾರು ಇನ್ನೂರು ಪತ್ರಕರ್ತರು ಆಗಮಿಸಿದರು, ಬೆಂಗಳೂರು, ಹೈದರಾಬಾದ್,ಮಂಗಳೂರು, ಮುಂಬಾಯಿ ಹೀಗೆ ದೇಶದ ಹಲವಾರು ಭಾಗಗಳಲ್ಲಿ ಚಿತ್ರದ ಪ್ರಮೋಷನಲ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು.ಅಲ್ಲೆಲ್ಲಾ ನಮಗೆ ಸಾಕಷ್ಟು ಪ್ರೊತ್ಸಾಹ ಮತ್ತು ಸಹಾಯ ದೊರಕಿದೆ. ಆದರೆ ಕೇರಳದ ಕೊಚಿಯಲ್ಲಿ ಮಾತ್ರ ಈ ರೀತಿ ನಡೆದಿರುವುದು ದುರದ್ರಷ್ಟಕರ ಬೆಳವಣಿಗೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹೇಳಿದ್ದಾರೆ. ಕೊನೆಗೆ 8 ಗಂಟೆಯ ಡಿನ್ನರ್ ಮೀಟ್ ನ ಬದಲು ಸಂಜೆ 5 ಗಂಟೆಗೆ ಗೋಷ್ಟಿಯನ್ನುಕೆಲವು ಪತ್ರಿಕಾಮಾಧ್ಯಮದವರ ಸಮ್ಮುಖದಲ್ಲಿ ಆಯೋಜಿಸಿದುದರಿಂದ ಕೊರಗಜ್ಜ ಚಿತ್ರದ ಪ್ರಮೋಷನ್ ಸೊರಗಿತು ಎಂದು ತ್ರಿವಿಕ್ರಮ ತಮ್ಮ ನೋವು ತೋಡಿಕೊಂಡಿದ್ದಾರೆ.













