Home News Actor Darshan: ನಟ ದರ್ಶನ್‌ ಹಾಸಿಗೆ ದಿಂಬು ವಿಚಾರ: ಆದೇಶ ಕಾಯ್ದಿರಿಸಿದ ಕೋರ್ಟ್‌

Actor Darshan: ನಟ ದರ್ಶನ್‌ ಹಾಸಿಗೆ ದಿಂಬು ವಿಚಾರ: ಆದೇಶ ಕಾಯ್ದಿರಿಸಿದ ಕೋರ್ಟ್‌

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿ ಇತರ ಸೌಲಭ್ಯ ನೀಡದಿರುವ ಕುರಿತು ಪ್ರಶ್ನೆ ಮಾಡಲಾಗಿ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿವಿಲ್‌ ಕೋರ್ಟ್‌ ನಡೆಸಿದೆ.

ಕೋರ್ಟ್‌ ಆದೇಶ ನೀಡಿದ ಹೊರತಾಗಿಯೂ ದರ್ಶನ್‌ಗೆ ಯಾವುದೇ ಸವಲತ್ತುಗಳನ್ನು ಜೈಲಾಧಿಕಾರಿಗಳು ನೀಡಿಲ್ಲ. ಇದು ಕೋರ್ಟ್‌ ಆದೇಶ ಉಲ್ಲಂಘನೆ ಎಂದು ದರ್ಶನ್‌ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ದರ್ಶನ್‌ ಪರ ವಕೀಲ, ಕೋರ್ಟ್‌ ಆದೇಶ ನೀಡಿದರೂ ದರ್ಶನ್‌ಗೆ ಯಾವುದೇ ಸವಲತ್ತು ನೀಡುತ್ತಿಲ್ಲ. ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ ಜೈಲಲ್ಲಿ ಕಲರ್‌ ಟಿವಿ ಕೊಡಲಾಗಿದೆ. ದರ್ಶನ್‌ ಬೆನ್ನುನೋವಿನಿಂದ ಬಳಲುತ್ತಿದ್ದರೂ ಹೆಚ್ಚುವರಿ ಹಾಸಿಗೆ, ತಲೆದಿಂಬು ಯಾವುದೇ ಸೌಲಭ್ಯ ನೀಡಿಲ್ಲ. ಕೋರ್ಟ್‌ ಆದೇಶವನ್ನು ಕೂಡ ಪಾಲಿಸದಿರುವುದು ನೋವುಂಟು ಮಾಡಿದೆ ಎಂದು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ:Mahesh Shetty Timarodi: ಮಹೇಶ್‌ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್‌ ನೀಡಿದ ಹೈಕೋರ್ಟ್‌

ಅರ್ಜಿ ವಿಚಾರಣೆಯ ಆದೇಶ ಅಕ್ಟೋಬರ್‌ 9 ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.