Home News Actor Darshan: ನಟ ದರ್ಶನ್‌ ಬೆನ್ನಿನ ಡಿಸ್ಕ್‌ನಲ್ಲಿ ನೋವು; ಸದ್ಯಕ್ಕೆ ಅಪರೇಷನ್‌ ಇಲ್ಲ-ವೈದ್ಯರು

Actor Darshan: ನಟ ದರ್ಶನ್‌ ಬೆನ್ನಿನ ಡಿಸ್ಕ್‌ನಲ್ಲಿ ನೋವು; ಸದ್ಯಕ್ಕೆ ಅಪರೇಷನ್‌ ಇಲ್ಲ-ವೈದ್ಯರು

Hindu neighbor gifts plot of land

Hindu neighbour gifts land to Muslim journalist

Actor Darshan: ನಟ ದರ್ಶನ್‌ ಮಂಗಳವಾರ ಕಾಮಾಕ್ಷಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಅವರ ಬೆನ್ನು ಮೂಳೆ ಸ್ವಲ್ಪ ಜರುಗಿದೆ ಎಂದು ವರದಿ ಹೇಳಿದೆ.

ದರ್ಶನ್‌ ಅವರ ದೇಹದ ನರಗಳು ಒತ್ತು ಹಾಕಿಕೊಂಡಿದ್ದು, ಇದರಿಂದ ಕಾಲು ನೋವು ಹೆಚ್ಚಾಗಿದ್ದು, ನಡೆಯುವುದಕ್ಕೆ ಕಷ್ಟ ಉಂಟಾಗಿದೆ. ಸಮಸ್ಯೆ ಹೆಚ್ಚಾಗಿರುವುದರಿಂದ ತುರ್ತು ಶಸ್ತ್ರ ಚಿಕಿತ್ಸೆ ಮಾಡಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಿಯಮಿತ ಫಿಸಿಯೋಥೆರಪಿ ಮತ್ತು ಮಾತ್ರೆಗಳಿಂದ ನಿವಾರಣೆ ಮಾಡಲು ಪ್ರಯತ್ನ ಪಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆನ್ನಿನ ಡಿಸ್ಕ್‌ನಲ್ಲಿ ನೋವು ಕಾಣಿಸಿಕೊಂಡಿದ್ದು, ಈ ಭಾಗದ ಮೂಳೆಗಳನ್ನು ಗಟ್ಟಿಗೊಳಿಸಬೇಕಿದ್ದರೆ ವ್ಯಾಯಾಮ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. ವ್ಯಾಯಾಮ ಮತ್ತು ಔಷಧಗಳಿಂದ ನೋವು ನಿವಾರಣೆಯಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.