Home News ಮತ್ತೊಂದು ವಿವಾದ ಸೃಷ್ಟಿಸಿದ ನಟ ಚೇತನ | ‘ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ‘ ತರಬೇಕೆಂದು ಕಿಡಿ

ಮತ್ತೊಂದು ವಿವಾದ ಸೃಷ್ಟಿಸಿದ ನಟ ಚೇತನ | ‘ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ‘ ತರಬೇಕೆಂದು ಕಿಡಿ

Hindu neighbor gifts plot of land

Hindu neighbour gifts land to Muslim journalist

ಚಾಮರಾಜನಗರ : ಕಾಂತಾರ ಸಿನಿಮಾದ ವಿವಾದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ನಟ ಚೇತನ್ ಸೃಷ್ಟಿಸಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಶೇ.70 ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಆದ್ದರಿಂದ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು ಎಂದು ಕಿಡಿಕಾರಿದ್ದಾರೆ.

ಚಾಮರಾಜನಗರದಲ್ಲಿ ನಡೆದ `ಮೀಸಲಾತಿ ಪ್ರಾತಿನಿಧ್ಯವೋ, ಆರ್ಥಿಕ ಸಬಲೀಕರಣವೋ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿ, 3ಬಿ ಯಿಂದ 2ಎಗೆ ಸೇರಿಸಿ ಅನ್ನೋ ಪಂಚಮಸಾಲಿಗಳ ಹೋರಾಟ ಸ್ವಾರ್ಥದ ಹೋರಾಟ. 4 ಪರ್ಸೆಂಟ್‌ನಿಂದ 12 ಪರ್ಸೆಂಟ್‌ಗೆ ಮೀಸಲಾತಿ ಹೆಚ್ಚಿಸಬೇಕೆನ್ನುವ ಒಕ್ಕಲಿಗರ ಹೋರಾಟ ಒಪ್ಪಬಹುದು ಎಂದು ಹೇಳಿದ್ದಾರೆ. ಅಷ್ಟು ಜನಸಂಖ್ಯೆ ಇದ್ರೆ ಮೀಸಲಾತಿ ಹೆಚ್ಚಳ ತಪ್ಪಿಲ್ಲ ಅಂದಿದ್ದಾರೆ. ಇದೇ ವೇಳೆ, ದಕ್ಷಿಣ ಆಫ್ರಿಕಾ ತಂಡದಲ್ಲಿ 6 ಮಂದಿ ಕರಿಯರಿಗೆ ಮೀಸಲಾತಿ ಇದೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ.

ಎಸ್ಸಿ, ಎಸ್ಟಿಗೆ ಮೀಸಲಾತಿ ಕೊಟ್ಟಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತೆ ಅಂತ ಚೇತನ್ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 186 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ 187 ರನ್ ಗಳಿಸಿ ಒಂದು ವಿಕೆಟ್ ರೋಚಕ ಜಯ ಸಾಧಿಸಿತು.