Home News ‌Sanjana Galrani: ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗರ್ಲಾನಿಗೆ ಸುಪ್ರೀಂ ಕೋರ್ಟ್‌ ನೋಟಿಸ್

‌Sanjana Galrani: ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗರ್ಲಾನಿಗೆ ಸುಪ್ರೀಂ ಕೋರ್ಟ್‌ ನೋಟಿಸ್

Hindu neighbor gifts plot of land

Hindu neighbour gifts land to Muslim journalist

Sanjana Galrani: ಪಂಚತಾರಾ ಪಾರ್ಟಿಗಳಿಗೆ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿದ ಆರೋಪದಲ್ಲಿ ದಾಖಲು ಮಾಡಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವುದನ್ನು ಪ್ರಶ್ನೆ ಮಾಡಿ ಕರ್ನಾಟಕ ಸರಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನಟಿ ಸಂಜನಾ ಗರ್ಲಾನಿ ಮತ್ತು ಇತರರಿಗೆ ನೋಟಿಸ್‌ ನೀಡಿ ಶುಕ್ರವಾರ ಆದೇಶ ಮಾಡಿದೆ.

ಇದನ್ನೂ ಓದಿ:Bigg Boss Kannada: ಬಿಗ್ ಬಾಸ್ ಮನೆಗೆ ಮಾಸ್ಕ್ ಮ್ಯಾನ್ ಜತೆಗೆ ಒಂದು ಕಾಕ್ರೋಚ್ ಎಂಟ್ರಿ!

ಸಂಜನಾ ಅವರು ಮಾದಕ ವಸ್ತುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿದ್ದರು. ಅವರು ಆಯೋಜನೆ ಮಾಡಿದ್ದ ಪಾರ್ಟಿಗಳಲ್ಲಿ ಯುವಕರಿಗೆ ವಿತರಿಸಿದ್ದರು ಎಂಬುವುದಕ್ಕೆ ವಿವಿಧ ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ. ಆರೋಪಿಗಳು ಮಾದಕವಸ್ತು ವ್ಯಾಪಾರಿಗಳು, ನೈಜೀರಿಯಾದ ನಾಗರಿಕರೊಂದಿಗೆ ಸಂಪರ್ಕದಲ್ಲಿದ್ದು, ಕೊಕೇನ್‌, ಎಂಡಿಎಂಎ, ಎಲ್‌ಎಸ್‌ಡಿ ಮುಂತಾದ ಮಾದಕ ವಸ್ತುಗಳನ್ನು ಖರೀದಿ ಮಾಡಿದ್ದರು ಎನ್ನುವುದಕ್ಕೆ ಮೊಬೈಲ್‌ ಫೋನ್‌ ಕರೆ ದಾಖಲೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಬಹಿರಂಗಪಡಿಸಿದೆ ಎಂದು ವಕೀಲರು ವಾದಿಸಿದರು.