Home News Liquor: ಕರ್ನಾಟಕದಲ್ಲಿ ಎಬಿಡಿ ಐಕಾನಿಕ್ ವೈಟ್ ವಿಸ್ಕಿ ಬ್ರ್ಯಾಂಡ್!

Liquor: ಕರ್ನಾಟಕದಲ್ಲಿ ಎಬಿಡಿ ಐಕಾನಿಕ್ ವೈಟ್ ವಿಸ್ಕಿ ಬ್ರ್ಯಾಂಡ್!

Hindu neighbor gifts plot of land

Hindu neighbour gifts land to Muslim journalist

Liquor: ಭಾರತದ 3ನೇ ಅತಿದೊಡ್ಡ ಸ್ಪಿರಿಟ್ಸ್ ಕಂಪನಿ ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ ಲಿಮಿಟೆಡ್ (ಎಬಿಡಿಎಲ್) ತನ್ನ ಐಕಾನಿಕ್ ವೈಟ್ ವಿಸ್ಕಿ (Liquor) ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ.

ಐಕಾನಿಕ್ ವೈಟ್ ಅನ್ನು ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಸ್ಪಿರಿಟ್ಸ್ ಬ್ರ್ಯಾಂಡ್ ಎಂದು ಪರಿಗಣಿಸಲಾಗಿದೆ.
ಮುಖ್ಯವಾಗಿ ವಿಸ್ಕಿ ಅನುಭವದಲ್ಲಿ ಸೊಫಿಸ್ಟಿಕೇಶನ್ ಮತ್ತು ರಿಫೈನ್ಮೆಂಟ್ ಅನ್ನು ಬಯಸುವವರಿಗೆಂದು ಐಕಾನಿಕ್ ವಿಸ್ಕಿ ಅನ್ನು ರೂಪಿಸಲಾಗಿದೆ. ಬೋರ್ಬನ್ ಓಕ್ ಕ್ಯಾಸ್ಕ್ಗಳಲ್ಲಿ ಹಳೆಯದಾಗಿಸಿದ, ಆಮದು ಮಾಡಿದ ಸ್ಕಾಚ್ ಮಾಲ್ಟ್ ಮತ್ತು ಭಾರತೀಯ ಧಾನ್ಯದ ಸ್ಪಿರಿಟ್ಸ್ನ ಮಿಶ್ರಣ ಇದಾಗಿದೆ.

ಕರ್ನಾಟಕದಲ್ಲಿ ಸ್ಪಿರಿಟ್ ಉದ್ಯಮದಲ್ಲಿ 80% ಕ್ಕೂ ಹೆಚ್ಚನ್ನು ವಿಸ್ಕಿ ಹೊಂದಿದ್ದು, ಐಕಾನಿಕ್ ವೈಟ್ ಅನ್ನು ಪರಿಚಯಿಸುವುದು ಎಬಿಡಿಯ ಪ್ರಮುಖ ಹೆಜ್ಜೆಯಾಗಿದೆ. P&A ವಲಯದಲ್ಲಿ ಮಹತ್ವದ ಪಾತ್ರ ವಹಿಸಲು ಮತ್ತು ಕರ್ನಾಟಕದ ಪೋರ್ಟ್ಫೋಲಿಯೋವನ್ನು ಪ್ರೀಮಿಯಂ ಆಗಿಸುವ ಗುರಿಯನ್ನು ಹೊಂದಿದೆ.

ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೋಕ್ ಗುಪ್ತಾ ಹೇಳುವಂತೆ “ಐಕಾನಿಕ್ ವೈಟ್ ವಿಸ್ಕಿ ಮೂಲಕ, ಡಿಲಕ್ಸ್ ಸೆಗ್ಮೆಂಟ್ನಲ್ಲಿ ಉನ್ನತ ಉತ್ಪನ್ನಗಳಿಗೆ ಸ್ಪಷ್ಟ ಬೇಡಿಕೆಯನ್ನು ನಾವು ಪೂರೈಸುತ್ತಿದ್ದೇವೆ.
ರಾಜ್ಯಾದ್ಯಂತ ಬ್ರ್ಯಾಂಡ್ ನಾಲ್ಕು ವಿಭಿನ್ನ ಎಸ್ಕೆಯುಗಳಲ್ಲಿ ಲಭ್ಯವಿರುತ್ತದೆ – 750 ಮಿ.ಲೀ ₹970, 375 ಮಿ.ಲೀ. ₹485, 180 ಮಿ.ಲೀ, ರೂ. 235 ಹಾಗೂ 90 ಮಿ.ಲೀ ₹120 ಆಗಿದೆ.

ಮುಖ್ಯವಾಗಿ ಐಕಾನಿಕ್ ವೈಟ್ ಈಗಾಗಲೇ ಭಾರತದ ಮಾರ್ಕೆಟ್ಗಳಾದ ಮಹಾರಾಷ್ಟ್ರ, ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಚಂಡೀಗಢ, ಗೋವಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಇತರೆ ಸೇರಿದಂತೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.