Home News Shocking : ಎರಡು ವರ್ಷಗಳಿಂದ ನಿರಂತರ ಬಿಕ್ಕಳಿಕೆ – ವೈದ್ಯರ ಬಳಿ ಹೋದ ಯುವತಿಗೆ ಕಾದಿತ್ತು...

Shocking : ಎರಡು ವರ್ಷಗಳಿಂದ ನಿರಂತರ ಬಿಕ್ಕಳಿಕೆ – ವೈದ್ಯರ ಬಳಿ ಹೋದ ಯುವತಿಗೆ ಕಾದಿತ್ತು ಅಘಾತ!!

Hindu neighbor gifts plot of land

Hindu neighbour gifts land to Muslim journalist

Shocking : ಬಿಕ್ಕಳಿಕೆ ಮನುಷ್ಯರ ಜೀವನದಲ್ಲಿ ಕಾಮನ್. ಆದರೆ ಇಲ್ಲೊಬ್ಬಳು ಯುವತಿಯ ಬಾಳಿಗೆ ಈ ಬಿಕ್ಕಳಿಕೆ ಕಂಟಕವಾಗಿದೆ. ಹೌದು, 24 ವರ್ಷದ ನರ್ಸ್ ಬೆಯ್ಲಿ ಮೆಕ್‌ಬ್ರೀನ್ ಎಂಬ ಯುವತಿಯ ವಿಷಯದಲ್ಲಿ, ಅತಿಯಾದ ಬಿಕ್ಕಳಿಕೆ ಕ್ಯಾನ್ಸರ್‌ ಗೆ ಕಾರಣವಾಗಿದೆ.

ಅಮೆರಿಕಾದ ಫ್ಲೋರಿಡಾದ ನಿವಾಸಿಯಾಗಿರುವ ನರ್ಸ್ ಬೆಯ್ಲಿ ಮೆಕ್‌ಬ್ರೀನ್ ಗೆ ಆರಂಭದಲ್ಲಿ ಎಲ್ಲರಂತೆ ಸಾಮಾನ್ಯವಾಗಿ ಬಿಕ್ಕಳಿಕೆ ಬರುತ್ತಿತ್ತು. ಆದರೆ ಎರಡು ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2021ರಲ್ಲಿ, ಆಕೆಗೆ ಆ ಬಿಕ್ಕಳಿಕೆ ಹೆಚ್ಚಾಗಿ ಬರಲು ಶುರುವಾಗಿದೆ. ಕೆಲವು ಸಮಯದ ಕಾಲ ಈ ಕುರಿತು ನಿರ್ಲಕ್ಷ ತೋರಿದ ಆಕೆ ನಂತರ ವೈದ್ಯರನ್ನು ಸಂಪರ್ಕಿಸಿದ್ದಾಳೆ. ಆಗ ವೈದ್ಯರು ಆಕೆಗೆ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿರುವ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಬಳಿಕ ಸಿಟಿ ಸ್ಕ್ಯಾನ್ ಮಾಡಿದ ನಂತರ, ಅವಳ ದೊಡ್ಡ ಕರುಳಿನಲ್ಲಿ (ಕೊಲೊನ್ ಕ್ಯಾನ್ಸರ್) ಗೆಡ್ಡೆ ಇರುವುದು ಬಹಿರಂಗವಾಯಿತು.

ತಮ್ಮ ಅನುಭವವನ್ನು ಹಂಚಿಕೊಂಡ ಬೆಯ್ಲಿ ಮೆಕ್‌ಬ್ರೀನ್, ಅತಿಯಾದ ಬಿಕ್ಕಳಿಕೆ ತನಗೆ ಮೊದಲ ಸೂಚನೆಯಾಗಿತ್ತು ಎಂದು ಹೇಳಿದರು. ಪ್ರತಿದಿನ 5-10 ಬಾರಿ ಬಿಕ್ಕಳಿಸುತ್ತಿದ್ದೆ, ಇದು ಅಸಾಮಾನ್ಯವಾಗಿತ್ತು ಏಕೆಂದರೆ ತನಗೆ ಈ ಹಿಂದೆ ಎಂದಿಗೂ ಬಿಕ್ಕಳಿಕೆ ಬಂದಿರಲಿಲ್ಲ. ಅದು ತನಗೆ ಬಹಳ ವಿಚಿತ್ರವಾಗಿ ಕಂಡಿತು, ಆದರೆ ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಮೂರನೇ ಹಂತದ ಕ್ಯಾನ್ಸರ್ ಎಂದು ಪತ್ತೆಯಾದ ನಂತರ, ತಾನು ಬಹಳ ಕಷ್ಟದಲ್ಲಿದ್ದೆ, ಆದರೆ ಕ್ರಮೇಣ ತಾನು ಹೋರಾಡಿ ರೋಗವನ್ನು ಸೋಲಿಸಲು ಧುಮುಕಿದೆ ಎಂದಿದ್ದಾರೆ.

ಇದನ್ನೂ ಓದಿ: Sadanand Master: ಎರಡು ಕಾಲಿಲ್ಲದ ಶಾಲಾ ಶಿಕ್ಷಕಕನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಬಿಜೆಪಿ – ಯಾರು ಈ ಸದಾನಂದ್ ಮಾಸ್ಟರ್?