Home News Shivamogga: ವಿಧವೆ ಎಂದು ಬಾಳುಕೊಟ್ಟವನ ಬಾಳಲ್ಲಿ ಚೆಲ್ಲಾಟವಾಡಿದ ಪತ್ನಿ; ಮದುವೆಯಾದ 15 ದಿನಕ್ಕೇ ಎಸ್ಕೇಪ್‌!

Shivamogga: ವಿಧವೆ ಎಂದು ಬಾಳುಕೊಟ್ಟವನ ಬಾಳಲ್ಲಿ ಚೆಲ್ಲಾಟವಾಡಿದ ಪತ್ನಿ; ಮದುವೆಯಾದ 15 ದಿನಕ್ಕೇ ಎಸ್ಕೇಪ್‌!

Hindu neighbor gifts plot of land

Hindu neighbour gifts land to Muslim journalist

Shivamogga: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪ ಮೌನೇಶ್‌ ಎಂಬಾತ 32 ವರ್ಷದ ವಿಧವೆ ದೀಪಿಕಾಳನ್ನು ಮದುವೆಯಾಗಿ ಬಾಳು ಕೊಟ್ಟಿದ್ದ. ಆದರೆ ಇಲ್ಲಿ ವಿಧವೆ ಎಂದು ಬಾಳು ಕೊಟ್ಟ ಯುವಕನ ಜೀವನದಲ್ಲಿ ಬರಸಿಡಿಲಿನಂತಹ ಸುದ್ದಿ ಬಡಿದಿದೆ. ವಧು ಹದಿನೈದು ದಿನಕ್ಕೇ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ.

ನೂರ್ಕಾಲ ಜೊತೆಯಾಗಿ ಇರುತ್ತೇನೆ ಎಂದು ಮಾತುಕೊಟ್ಟು ಸಪ್ತಪದಿ ತುಳಿದವಳು 15 ದಿನಕ್ಕೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಯುವಕನ ಬಾಳಲ್ಲಿ ಚೆಲ್ಲಾಟವಾಡಿದ್ದಾಳೆ.

ಮೌನೇಶ್‌ ಎಂಬಾತ ದೀಪಿಕಾಳನ್ನು ಮದುವೆಯಾಗಿದ್ದ. ಮೌನೇಶ್‌ಗೆ ತಂದೆ ತಾಯಿ ಇಲ್ಲ. ಅನಾಥ, ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪದಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ದೀಪಿಕಾ ಮದುವೆಯಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾಳೆ. ಆದರೆ 10 ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡಿದ್ದಾಳೆ. 32 ವರ್ಷದ ವಿಧವೆ ದೀಪಿಕಾಳಿಗೆ ಮೌನೇಶ್‌ ಬಾಳು ಕೊಟ್ಟಿದ್ದ.

ಫೆ.7 ರಂದು ನವುಲೆಯ ಚೌಡೇಶ್ವರಿ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದರು. ನಂತರ ಇವರಿಬ್ಬರು ಧರ್ಮಸ್ಥಳ ಸೇರಿ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು. ಆದರೆ ಮದುವೆಯಾ ಎರಡನೇ ದಿನಕ್ಕೆ ತವರು ಮನೆ ಸೇರಿದ ಈಕೆ 15 ನೇ ದಿನಕ್ಕೆ ಗಂಡನಿಗೆ ಕೈ ಕೊಟ್ಟು ಎಸ್ಕೇಪ್‌ ಆಗಿದ್ದಾಳೆ.

ಚಿಕ್ಕಮಗಳೂರು ತಾಲೂಕಿನ ಕಳಸ ಠಾಣೆ ಎಎಸ್‌ಐ ಪೂರ್ಣೇಶ್‌ ಎನ್ನುವವರು ದೀಪಿಕಾ ಪರಿಚಯವಿದ್ದು, ದೀಪಿಕಾ ಹೆಸರಿನಲ್ಲಿ ಎರಡು ಎಕರೆ ಜಮೀನು ಕೂಡಾ ಇತ್ತು. ಇದರ ಮೇಲೆ ಕಣ್ಣಿಟ್ಟಿದ್ದ ಪೂರ್ಣೇಶ್‌ ಎನ್ನುವ ಆರೋಪವಿದೆ. ಈಕೆ ಜೊತೆ ಸಂಬಂಧವಿಟ್ಟುಕೊಂಡು ನಮ್ಮಿಬ್ಬರ ನಡುವೆ ಹುಳಿ ಹಿಂಡಿದ್ದಾನೆ ಎಂದು ಮೌನೇಶ್‌ ಆರೋಪ ಮಾಡಿದ್ದಾನೆ.

ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ನನ್ನ ಪತ್ನಿಯಿಂದಲೇ ನನ್ನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಮೌನೇಶ್‌ ಅಳಲು ತೋಡಿಕೊಂಡಿದ್ದಾನೆ.