Home News D K Shivkumar : ‘ಗಂಡುಮೆಟ್ಟಿದ ನೆಲ, ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಗೆ ಆತ್ಮೀಯ...

D K Shivkumar : ‘ಗಂಡುಮೆಟ್ಟಿದ ನೆಲ, ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಗೆ ಆತ್ಮೀಯ ಸ್ವಾಗತ’!! ಕರಾವಳಿ ಪ್ರವಾಸ ಕೈಗೊಂಡಿರುವ ಡಿಕೆಶಿಗೆ ಬಿಜೆಪಿ ಶಾಸಕರಿಂದ ವಿಶೇಷ ವೆಲ್ ಕಮ್ !!

Hindu neighbor gifts plot of land

Hindu neighbour gifts land to Muslim journalist

D K Shivkumar : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪ್ರವಾಸ ಕೈಗೊಂಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬಿಜೆಪಿಯು ವಿಶೇಷವಾದ ಪೋಸ್ಟ್ ಹಾಕುವ ಮುಖಾಂತರ ಸ್ವಾಗತವನ್ನು ನೀಡಿದೆ.

ಹೌದು, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ (ಮಾರ್ಚ್ 2) ಉಡುಪಿಯಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಡಿಕೆ ಶಿವಕುಮಾರ್ ಅವರಿಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?

ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ…

ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ…

ಹಿಂದುವಾಗಿ ಹುಟ್ಟಿ ಹಿಂದುವಾಗಿಯೇ ಸಾಯುವೆ ಎಂದ…

ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ…. ಎಂದು ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ.

ಅಷ್ಟೇ ಅಲ್ಲದೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನಿಮ್ಮ ಈ ಭೇಟಿ ಹಿಂದುತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಫಲಪ್ರದವಾಗಲಿ ಎಂದು ಉಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಫೇಸ್ಬುಕ್ ನಲ್ಲಿ ಟ್ಯಾಗ್ ಮಾಡಿ ಸುನಿಲ್ ಕುಮಾರ್ ಅವರು ವಿಶೇಷ ಸ್ವಾಗತ ಕೋರಿದ್ದಾರೆ.