Home News Bagar Hukum: ಅಕ್ರಮವಾಗಿ ‘ಬಗರ್ ಹುಕುಂ ಜಮೀನು’ ಮಂಜೂರಾತಿ ಪಡೆದವರಿಗೆ ಸರ್ಕಾರದಿಂದ ಅಘಾತ

Bagar Hukum: ಅಕ್ರಮವಾಗಿ ‘ಬಗರ್ ಹುಕುಂ ಜಮೀನು’ ಮಂಜೂರಾತಿ ಪಡೆದವರಿಗೆ ಸರ್ಕಾರದಿಂದ ಅಘಾತ

Hindu neighbor gifts plot of land

Hindu neighbour gifts land to Muslim journalist

 

Bagar Hukum: ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು, ಅಕ್ರಮವಾಗಿ ಬಗರ್ ಹುಕುಂ(Bagar Hukum) ಜಮೀನು ಮಂಜೂರಾತಿ ಪಡೆದವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.

 

ಹೌದು, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಅಕ್ರಮವಾಗಿ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿ ಪಡೆದವರಿಗೆ ಖಾತೆ ಮಾಡಿಕೊಡುವುದಿಲ್ಲ ಅಂತ ಹೇಳುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.

 

ವಿಧಾನಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿರುವಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಬಗರ್‌ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ದೂರು ಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮವಾಗಿ ಮಂಜೂರಾದ ಪ್ರಕರಣಗಳಲ್ಲಿ ಖಾತೆ ಆಗುವುದಿಲ್ಲ. ಕ್ರಮಬದ್ಧವಾಗಿ ಇರುವ ಪ್ರಕರಣಗಳಲ್ಲಿ ಖಾತೆ ಮಾಡಿಕೊಡಲಾಗುತ್ತದೆ ಎಂದಿದ್ದಾರೆ.