Home News RCB ಗೆಲುವನ್ನು ಸಂಭ್ರಮಿಸಿದ ವಿಜಯ್‌ ಮಲ್ಯ ಟ್ವೀಟ್‌ಗೆ ʼಪ್ರೀತಿʼ ಭರಿತ ವಿಶೇಷ ಆಹ್ವಾನ ಕೊಟ್ಟ SBI

RCB ಗೆಲುವನ್ನು ಸಂಭ್ರಮಿಸಿದ ವಿಜಯ್‌ ಮಲ್ಯ ಟ್ವೀಟ್‌ಗೆ ʼಪ್ರೀತಿʼ ಭರಿತ ವಿಶೇಷ ಆಹ್ವಾನ ಕೊಟ್ಟ SBI

Hindu neighbor gifts plot of land

Hindu neighbour gifts land to Muslim journalist

SBI tweet to Vijay Mallya: ಮದ್ಯದೊರೆ ವಿಜಯ್‌ ಮಲ್ಯ ಈ ಬಾರಿ ಆರ್‌ಸಿಬಿ ಗೆದ್ದ ಬೆನ್ನಲ್ಲೇ ಟ್ವೀಟ್‌ ಮಾಡಿದ್ದಾರೆ. ಅವರಿಗೆ ಅನೇಕರು ಪ್ರತಿಕ್ರಿಯೆ ನೀಡಿ ವಿಷ್ ಕೂಡಾ ಮಾಡಿದ್ದಾರೆ. ಆದರೂ ಈಗ SBI ನೀಡಿದ ಪ್ರತಿಕ್ರಿಯೆ ಸಾಕಷ್ಟು ವೈರಲ್‌ ಆಗಿ ವಿಶೇಷದ ರಿಪ್ಲೈ ಅನ್ನಿಸಿದೆಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಕಪ್‌ (RCB) ಗೆದ್ದಿದೆ.

ಬರೋಬ್ಬರಿ 18 ವರ್ಷದ ನಂತರ ಇದೇ ಮೊದಲ ಬಾರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆದ್ದ ಸಂಭ್ರಮ ಎಲ್ಲೆಡೆ ಇದೆ. 11 ಜನ ಸತ್ತ ನೋವು ಇದ್ದರೂ ಸಂಭ್ರಮದ ಮಾತುಗಳು ನಿಲ್ಲುತ್ತಲೆ ಇಲ್ಲ. ಈ ನಡುವೆ ಗಮನ ಸೆಳೆದದ್ದು ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್‌ ಮಲ್ಯ ಟ್ವೀಟ್‌. ಅದಕ್ಕೂ ಮಿಗಿಲಾಗಿ ವಿಶೇಷ ಅನ್ನಿಸಿದ್ದು ವಿಜಯ್‌ ಮಲ್ಯ (Vijay Mallya) ಟ್ವೀಟ್‌ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank Of India) ನೀಡಿದ ಪ್ರತಿ ಟ್ವೀಟ್!

ವಿಜಯ್‌ ಮಲ್ಯ ಸಾಲ ತೀರಿಸಲಾಗದೇ ಭಾರತ ತೊರೆದಿದ್ದಾರೆ. ಕಿಂಗ್‌ ಫಿಶರ್‌ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನ ಮಾಜಿ ಅಧ್ಯಕ್ಷ. ಇಲ್ಲಿನ ಬ್ಯಾಂಕ್‌ಗಳಲ್ಲಿ 9,000 ಕೋಟಿ ರೂಗೂ ಅಧಿಕ ಸಾಲ ಬಾಕಿ ಇದೆ ಅಂತ ಬ್ಯಾಂಕುಗಳು ಹೇಳುತ್ತಿವೆ. ಆದರೆ ಮಲ್ಯ ಅಷ್ಟು ಬಾಕಿ ಇಲ್ಲ, ಸ್ವಲ್ಪವೇ ಇರೋದು. ನಾನು ಕೊಡುತ್ತೇನೆ ಅಂತಿದ್ದಾರೆ. ಸದ್ಯ ವಿದೇಶದಲ್ಲೇ ಸೆಟ್ಲ್‌ ಆಗಿದ್ದಾರೆ ಮಲ್ಯ. ಅಲ್ಲಿದ್ದರೂ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಿದ್ದಾರೆ.

ಮಲ್ಯ ಟ್ವೀಟ್‌, SBI ಮರು ಟ್ವೀಟ್ 

ವಿಜಯ್‌ ಮಲ್ಯ ಅವರು ಈ ಬಾರಿ ಆರ್‌ಸಿಬಿ ಗೆದ್ದ ಬೆನ್ನಲ್ಲೇ ಟ್ವೀಟ್‌ ಮಾಡಿ. ʼಆರ್‌ಸಿಬಿ ಟೀಮ್‌ ಕೊನೆಗೂ 18 ವರ್ಷಗಳ ಬಳಿಕ ಚಾಂಪಿಯನ್ಸ್‌ ಆಗಿದೆ. 2025ರ ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ತುಂಬ ಚೆನ್ನಾಗಿ ಆಡಿದೆ. ಅತ್ಯುತ್ತಮ ತರಬೇತಿ ಮತ್ತು ಸಹಾಯಕ ಸಿಬ್ಬಂದಿ ಸಹಕಾರದೊಂದಿಗೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆʼ ಈ ಸಲ ಕಪ್‌ ನಮ್ಮದೆ’ ಎಂದಿದ್ದರು.

ಹಾಗೇಯೇ ಅವರು ಇನ್ನೊಂದು ಪೋಸ್ಟ್‌ ಬರೆದು “ನಾನು ಆರ್‌ಸಿಬಿಯನ್ನ ಸ್ಥಾಪಿಸಿದಾಗ, ಬೆಂಗಳೂರು ಐಪಿಎಲ್‌ ಟ್ರೋಫಿ ಗೆಲ್ಲಬೇಕು ಎಂಬುದು ನನ್ನ ಕನಸಾಗಿತ್ತು. ಕಿಂಗ್‌ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನಾನು ಪಡೆದಿದ್ದೆ. ಅಂದು ನಾನು ಆಯ್ಕೆ ಮಾಡಿಕೊಂಡ ಬಳಿಕ 18 ವರ್ಷಗಳ ಕಾಲ ಅವರು ಆರ್‌ಸಿಬಿ ಜೊತೆಗೇ ಇದ್ದಾರೆ. ಯುನಿವರ್ಸಲ್ ಬಾಸ್‌ ಕ್ರಿಸ್‌ ಗೇಲ್‌ ಮತ್ತು ಆರ್‌ಸಿಬಿ ಪಾಲಿಗೆ ಅಳಿಸಲಾಗದ ಇತಿಹಾಸ ಆಗಿರುವ ಎಬಿ ಡಿವಿಲಿಯರ್ಸ್’ರನ್ನೂ ಆಯ್ಕೆ ಮಾಡಿದ್ದೆ. ಈಗ ಅಂತಿಮವಾಗಿ ಟ್ರೋಫಿ ಬೆಂಗಳೂರಿಗೆ ಬರುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು” ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಕಿಚಾಯಿಸಿದ SBI!?

ವಿಜಯ್‌ ಮಲ್ಯ ಟ್ವೀಟ್‌ಗೆ ಅನೇಕರಂತೂ ಮಲ್ಯ ಕಾಲೆಳೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಕರೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ SBIನ ಪ್ರತಿಕ್ರಿಯೆ ಗಮನ ಸೆಳೆದಿದೆ. “ಸರ್‌..ಭಾರತಕ್ಕೆ ಬನ್ನಿ. ನಾವೆಲ್ಲ ಒಟ್ಟಾಗಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸೋಣ” ಎಂದು ಪ್ರೀತಿಯ ಇಮೋಜಿ ಹಾಕಿ SBI ಹೇಳಿದೆ. ಇದೀಗ ಎಸ್‌ಬಿಐ ಟ್ವೀಟ್‌ನ ಸ್ಕ್ರೀನ್‌ಶಾಟ್‌ನ್ನ ಉದ್ಯಮಿ ಹರ್ಷ ಗೋಯೆಂಕಾ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಎಸ್‌ಬಿಐ ವಿಜಯ್‌ ಮಲ್ಯರನ್ನ ಟ್ರೋಲ್‌ ಮಾಡಿತಾ? ಕಿಚಾಯಿಸಿತಾ ಅಥವಾ ನಿಜಕ್ಕೂ ಪ್ರೀತಿಯಿಂದ ಕರೆಯಿತಾ? ಗೊತ್ತಿಲ್ಲ. ಪ್ರೀತಿಯಿಂದ ಕರೆದು ಕೇಳಿದರೆ ಬಾಕಿ ಲೋನ್ ಕಟ್ಟುತ್ತಾರೆ ಅನ್ನೋದು SBI ಬ್ಯಾಂಕಿನ ಪ್ಲಾನ್ ಇರಬಹುದೇ!? ಅದೂ ಗೊತ್ತಿಲ್ಲ.

Bantwal: ಬಂಟ್ವಾಳ: 13ನೇ ವಯಸ್ಸಿಗೆ ಮನೆ ಬಿಟ್ಟವ 75 ವರ್ಷಕ್ಕೆ ವಾಪಸ್- ಅಷ್ಟಕ್ಕೂ ಈಗ ಬಂದದ್ದು ಯಾಕೆ ಗೊತ್ತಾ?