Home News Heart Attack: ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ!

Heart Attack: ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ!

Hindu neighbor gifts plot of land

Hindu neighbour gifts land to Muslim journalist

Heart Attack: ಗಣೇಶ ವಿಸರ್ಜನಾ ಮೆರವಣಿಗೆ (Ganesha Procession) ವೇಳೆ ಡ್ಯಾನ್ಸ್‌ ಮಾಡುತ್ತಿದ್ದ ಮಂಜುನಾಥ್ (55)ಎಂಬವರು ಡಿಜೆ ಸೌಂಡ್‌ನಿಂದ ಹೃದಯಾಘಾತಕ್ಕೆ (Heart Attack) ಬಲಿಯಾದ ಘಟನೆ ಕೆಆರ್‌ಪೇಟೆಯ (KR Pete) ಜೊತ್ತನಪುರ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಗಣೇಶ ಮೂರ್ತಿಯ ವಿಸರ್ಜನೆಗೂ ಮುನ್ನ ಜೊತ್ತನಪುರ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರು ಬಣ್ಣ ಹಾಕಿಕೊಂಡು ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದರು. ಗ್ರಾಮಸ್ಥರೊಂದಿಗೆ ಮಂಜುನಾಥ್ ಸಹ ಕುಣಿದು ಕುಪ್ಪಳಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆ ಹಿಡಿದುಕೊಂಡು ಅವರು ಕುಸಿದುಬಿದ್ದಿದ್ದಾರೆ. ಜೊತೆಯಲ್ಲಿ ಇದ್ದವರು ನೋಡುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.