Home News Suicide: “ಅಮ್ಮಾ ನಾನೇ ಸಾಯ್ತೀನಿ, ಇಲ್ದಿದ್ರೆ ಅವ್ರೇ ಸಾಯಿಸ್ತಾರೆ” ತಾಯಿಗೆ ಮೆಸೇಜ್ ಕಳುಹಿಸಿ ತುಂಬು ಗರ್ಭಿಣಿ...

Suicide: “ಅಮ್ಮಾ ನಾನೇ ಸಾಯ್ತೀನಿ, ಇಲ್ದಿದ್ರೆ ಅವ್ರೇ ಸಾಯಿಸ್ತಾರೆ” ತಾಯಿಗೆ ಮೆಸೇಜ್ ಕಳುಹಿಸಿ ತುಂಬು ಗರ್ಭಿಣಿ ಆತ್ಮ*ಹತ್ಯೆ

Hindu neighbor gifts plot of land

Hindu neighbour gifts land to Muslim journalist

Suicide: ನಿರಂತರ ಕಿರುಕುಳದಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಜುಲೈ 29ರಂದು ಈ ಘಟನೆ ನಡೆದಿದೆ.

ಇರಿಂಜಲಕುಡ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ಅವರನ್ನು ಬಂಧಿಸಿದ್ದು, ಇಬ್ಬರನ್ನೂ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿತ್ಯವೂ ಅತ್ತೆ ಮನೆಯಲ್ಲಿ ಮಹಿಳೆ ನರಕ ಅನುಭವಿಸುತ್ತಿದ್ದರು. ತಾಯಿಗೆ ಕಳುಹಿಸಿರುವ ಸಂದೇಶದಲ್ಲಿ ಅತ್ತೆ ನಿತ್ಯವೂ ತನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಬರೆದಿದ್ದರು.

ತನ್ನ ತಾಯಿಗೆ ಕಳುಹಿಸಿದ ಸಂದೇಶಗಳಲ್ಲಿ, ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೇನೆ ಮತ್ತು ತನ್ನ ಪತಿ ತನ್ನ ಹೊಟ್ಟೆಗೆ ಹಲವು ಬಾರಿ ಒದ್ದಿದ್ದಾನೆ. ನನ್ನ ಒಂದು ಕೈ ಮುರಿದಿದ್ದಾನೆ. ಕೊನೆಯ ಸಂದೇಶಗಳಲ್ಲಿ ಒಂದರಲ್ಲಿ, ಫಸೀಲಾ ತನ್ನ ತಾಯಿಗೆ ನಾನು ಸಾಯುತ್ತೇನೆ, ಇಲ್ಲದಿದ್ದರೆ ಅವರು ನನ್ನನ್ನು ಕೊಲ್ಲುತ್ತಾರೆ ಎಂದು ಬರೆದಿದ್ದಾರೆ. ಇದೀಗ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಇತರೆ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Food Oil: ಇನ್ಮೇಲೆ ಅಡುಗೆ ಎಣ್ಣೆಯನ್ನು 6 ತಿಂಗಳಿಗೊಮ್ಮೆ ಗುಣಮಟ್ಟ ತಪಾಸಣೆ: ಆರೋಗ್ಯ ಇಲಾಖೆ ಸೂಚನೆನ್ನೂ ಓದಿ: