Home News Allahabad Court: ಮದುವೆಯಾದವನು ಕರಿಮಣಿಗಷ್ಟೇ ಮಾಲೀಕ, ಹೆಂಡತಿಗಲ್ಲ- ಹೈಕೋರ್ಟ್ ಮಹತ್ವದ ತೀರ್ಪು!!

Allahabad Court: ಮದುವೆಯಾದವನು ಕರಿಮಣಿಗಷ್ಟೇ ಮಾಲೀಕ, ಹೆಂಡತಿಗಲ್ಲ- ಹೈಕೋರ್ಟ್ ಮಹತ್ವದ ತೀರ್ಪು!!

Hindu neighbor gifts plot of land

Hindu neighbour gifts land to Muslim journalist

Allahabad Court: ಅಲಹಾಬಾದ್ ಹೈಕೋರ್ಟು ಇತ್ತೀಚಿಗೆ ತನ್ನ ಕೆಲವು ವಿಶೇಷ ತೀರ್ಪುಗಳ ಮುಖಾಂತರ ಸುದ್ದಿಯಾಗುತ್ತಿದೆ. ಇತ್ತೀಚಿಗಷ್ಟೇ ಮಹಿಳೆಯರ ಸ್ಥಾನ ಮುಟ್ಟುವುದು ಪ್ಯಾಂಟ್ ಎಳೆಯುವುದು ಅತ್ಯಾಚಾರ ಆಗುವುದಿಲ್ಲ ಎಂದು ಇದೇ ಕೋರ್ಟ್ ಆದೇಶಿಸಿತ್ತು. ಇದೀಗ ಈ ಬೆನ್ನಲ್ಲೇ ಮದುವೆಯಾದವನು ಕರಿಮಣಿಗಷ್ಟೇ ಮಾಲೀಕ ಹೆಂಡತಿಗೆ ಅಲ್ಲ ಎಂದು ಇದೇ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಅಂದಹಾಗೆ ಮಿರ್ಜಾಪುರ ಜಿಲ್ಲೆಯಲ್ಲಿ ಪ್ರದುಮ್ನ ಯಾದವ್ ಎಂಬಾತನ ಹೆಂಡತಿಗೆ ಅರಿವಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ತಮ್ಮ ನಡುವಿನ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ, ಅದನ್ನು ಮೊದಲು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ನಂತರ ತನ್ನ ಸೋದರಸಂಬಂಧಿ ಮತ್ತು ಇತರ ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆತನ ಹೆಂಡತಿ ಆರೋಪಿಸಿದ್ದರು. ಈ ವೇಳೆ ತನ್ನ ವಿರುದ್ಧ ಬಂದಿರುವ ದೋಷಾರೋಪವನ್ನು ಮುಕ್ತಗೊಳಿಸಬೇಕೆಂದು ಆತ ಕೋರ್ಟ್ ಮೆಟ್ಟಿಲೇರಿದ್ದ.

ಈ ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್ ವಿವಾಹ ಎನ್ನುವುದು ಗಂಡನಿಗೆ ತನ್ನ ಹೆಂಡತಿ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣವನ್ನು ನೀಡುವುದಿಲ್ಲ ಎಂದು ತಿಳಿಸಿ ಈ ಮೊಕದ್ದಮೆಯನ್ನು ರದ್ದುಗೊಳಿಸಲು ಇದೀಗ ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿನೋದ್ ದಿವಾಕರ್, ಫೇಸ್‌ಬುಕ್‌ನಲ್ಲಿ ಖಾಸಗಿ ಕ್ಷಣಗಳ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿದಾರ (ಪತಿ) ವೈವಾಹಿಕ ಸಂಬಂಧದ ಪಾವಿತ್ರ್ಯವನ್ನು ಗಂಭೀರವಾಗಿ ಉಲ್ಲಂಘಿಸಿದ್ದಾನೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಪತಿಯು ತನ್ನ ಹೆಂಡತಿ ತನ್ನಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಗೌರವಿಸಬೇಕು. ವಿಶೇಷವಾಗಿ ಅವರ ಆತ್ಮೀಯ ಸಂಬಂಧದ ಸಂದರ್ಭದಲ್ಲಿ. ಅಂತಹ ವಿಷಯವನ್ನು ಹಂಚಿಕೊಳ್ಳುವ ಕ್ರಿಯೆಯು ಗಂಡ ಮತ್ತು ಹೆಂಡತಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೌಪ್ಯತೆಯ ಉಲ್ಲಂಘನೆಗೆ ಸಮನಾಗಿರುತ್ತದೆ. ಈ ನಂಬಿಕೆಯ ಉಲ್ಲಂಘನೆಯು ವೈವಾಹಿಕ ಸಂಬಂಧದ ಅಡಿಪಾಯವನ್ನೇ ಹಾಳು ಮಾಡುತ್ತದೆ ಮತ್ತು ವೈವಾಹಿಕ ಬಂಧದಿಂದ ರಕ್ಷಿಸಲ್ಪಡುವುದಿಲ್ಲ ಎಂದು ನ್ಯಾಯಾಲ ಹೇಳಿದೆ.