Home News Mangaluru ಜೈಲಿಗೆ ಹೊರಗಿಂದ ಗಮ್ ಟೇಪ್ ಸುತ್ತಿದ ಪೊಟ್ಟಣಗಳನ್ನು ಎಸೆದ ಯುವಕ!! ಅದರೊಳಗೆ ಏನಿತ್ತು? ಮುಂದೆ...

Mangaluru ಜೈಲಿಗೆ ಹೊರಗಿಂದ ಗಮ್ ಟೇಪ್ ಸುತ್ತಿದ ಪೊಟ್ಟಣಗಳನ್ನು ಎಸೆದ ಯುವಕ!! ಅದರೊಳಗೆ ಏನಿತ್ತು? ಮುಂದೆ ಏನಾಯ್ತು

Hindu neighbor gifts plot of land

Hindu neighbour gifts land to Muslim journalist

Mangaluru : ಮಂಗಳೂರಿನ ಜೈಲಿಗೆ ಹೊರಗಡೆಯಿಂದ ಯುವಕನೋರ್ವನು ಮೊಬೈಲ್ ಹಾಗೂ ಸಿಗರೇಟ್ ಎಸೆಯಲು ಯತ್ನಿಸಿದ್ದು ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಪ್ರಜ್ವಲ್ (21) ಎಂದು ಗುರುತಿಸಲಾಗಿದೆ. ಇವನು ಪಂಜಿಮೊಗರಿನ ನಿವಾಸಿ. ಈತ ರವಿವಾರ ಅಪರಾಹ್ನ 3ಕ್ಕೆ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿ ಅಲ್ಲಿಂದ ಕಾರಾಗೃಹದ ಒಳಗೆ ಕೆಂಪು ಬಣ್ಣದ ಗಮ್‌ಟೇಪ್‌ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ತಗಲಾಕ್ಕೊಂಡಿದ್ದಾನೆ.

ಗಸ್ತುನಿರತ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಕೈಗೆ ಈತ ಸಿಕ್ಕಿಬಿದ್ದಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.