Home News Singapore: ಪತ್ನಿಯನ್ನು ಪರಪುರುಷನೊಂದಿಗೆ ಹಂಚಿಕೊಳ್ಳುವ ಫ್ಯಾಂಟಸಿ ಬಯಕೆ ಹೊಂದಿದ ಪತಿ! ನಂತರ ಏನಾಯ್ತು? ಕುತೂಹಲ ಮಾಹಿತಿ...

Singapore: ಪತ್ನಿಯನ್ನು ಪರಪುರುಷನೊಂದಿಗೆ ಹಂಚಿಕೊಳ್ಳುವ ಫ್ಯಾಂಟಸಿ ಬಯಕೆ ಹೊಂದಿದ ಪತಿ! ನಂತರ ಏನಾಯ್ತು? ಕುತೂಹಲ ಮಾಹಿತಿ ಇಲ್ಲಿದೆ

Singapore

Hindu neighbor gifts plot of land

Hindu neighbour gifts land to Muslim journalist

Singapore: ಪತಿ-ಪತ್ನಿ ಸಂಬಂಧವು ಅತ್ಯಂತ ಪವಿತ್ರ ಸಂಬಂಧಗಳಲ್ಲಿ ಒಂದಾಗಿದೆ. ಆದರೆ ಯಾರಾದರೂ ಈ ಪಾವಿತ್ರ್ಯಕ್ಕೆ ಭಂಗ ತಂದರೆ ಏನಾಗುತ್ತದೆ. ಸಂಬಂಧದ ಪಾವಿತ್ರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ಅನಾಗರಿಕತೆ ಉಂಟಾಗುತ್ತದೆ. ಸಿಂಗಾಪುರದಲ್ಲಿ(Singapore) ನೆಲೆಸಿರುವ ವ್ಯಕ್ತಿಯೊಬ್ಬ ಕೂಡಾ ಮಾಡಿದ್ದು ಇದನ್ನೇ. ವಾಸ್ತವವಾಗಿ, ಈ ವ್ಯಕ್ತಿ ತನ್ನ ಹೆಂಡತಿಯನ್ನು ಇತರ ಪುರುಷರೊಂದಿಗೆ ಸಂಬಂಧ ಹೊಂದಲು ಒತ್ತಾಯಿಸಿದ್ದು, ಈಗ ಅದಕ್ಕೆ ಶಿಕ್ಷೆಯಾಗಿದೆ. ಈ ಶಿಕ್ಷೆಯೂ ಎಷ್ಟು ದೀರ್ಘವಾಗಿದೆ ಎಂದರೆ ಈಗ ಅವನು ತನ್ನ ಇಡೀ ಜೀವನವನ್ನು ಜೈಲಿನ ಕತ್ತಲಕೋಣೆಯಲ್ಲಿ ಕಳೆಯ ಬೇಕಾಗಿದೆ.

ಸಿಂಗಾಪುರದಲ್ಲಿ ನೆಲೆಸಿರುವ ಈ ವ್ಯಕ್ತಿಯ ಹೆಸರು ಜೇ. ತನ್ನ ಪತ್ನಿಯನ್ನು ಐವರು ಪುರುಷರಿಂದ ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಿಂಗಾಪುರದ ಹೈಕೋರ್ಟ್ ಗುರುವಾರ ಜೇಗೆ 29 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆತನಿಗೆ 24 ಛಡಿ ಏಟಿನ ಶಿಕ್ಷೆಯನ್ನೂ ನೀಡಲಾಗಿದೆ. ಜೆ (42ವರ್ಷ) ಐದು ಜನರನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಭೇಟಿಯಾಗಿದ್ದರು. ಈ ವ್ಯಕ್ತಿ ಮೊದಲು ತನ್ನ ಪತ್ನಿಗೆ ಮಾದಕ ದ್ರವ್ಯವನ್ನು ನೀಡಿ ಅಪರಾಧ ಎಸಗುತ್ತಿದ್ದ. ಇದಾದ ನಂತರ ಆಕೆ ಮೂರ್ಛೆ ಬಿದ್ದಾಗ ಬೇರೆ ಗಂಡಸರು ಆಕೆಯ ಮೇಲೆ ಅತ್ಯಾಚಾರ ಮಾಡಲು ಅವಕಾಶ ನೀಡುತ್ತಿದ್ದ. ಈ ಕ್ರೌರ್ಯ ಎಂಟು ವರ್ಷಗಳ ಕಾಲ ಮುಂದುವರೆಯಿತು.

ವಿಚಾರಣೆ ವೇಳೆ ನ್ಯಾಯಾಲಯವು ಈ ವಿಷಯವನ್ನು ಅತ್ಯಂತ ಹೇಯ ಎಂದು ಬಣ್ಣಿಸಿದೆ. ಈ ಆರೋಪಗಳನ್ನು ಹವಾನ್ ಪತಿ ಕೂಡ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ಜೆ 2008 ರಲ್ಲಿ ವಿವಾಹವಾಗಿದ್ದು, ಮದುವೆಯಾದ ನಂತರ ಪತ್ನಿಯೊಂದಿಗೆ ವಿಚಿತ್ರವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಒಮ್ಮೆ ಅವನು ತನ್ನ ಹೆಂಡತಿಯನ್ನು ಇತರ ಪುರುಷರೊಂದಿಗೆ ಸಂಬಂಧ ಹೊಂದಲು ಕೇಳಿದ್ದಾನೆ. ಆದರೆ ಪತ್ನಿ ಛೀಮಾರಿ ಹಾಕಿದ್ದಾಳೆ. ಆದರೆ, ಅವನು ಸುಮ್ಮನೆ ಕುಳಿತುಕೊಳ್ಳಲಿಲ್ಲ, ಬದಲಿಗೆ ತನ್ನ ದುಷ್ಟ ಮನಸ್ಸಿನಲ್ಲಿ ತನ್ನ ಯೋಜನೆಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದ್ದ.

ಜೆ ಈ ಐದು ಜನರನ್ನು ಸಾಮಾಜಿಕ ಮಾಧ್ಯಮ ಭೇಟಿಯಾಗಿದ್ದ. ಜೇ 2010 ರಲ್ಲಿ ಈ ಎಲ್ಲ ಜನರನ್ನು ಭೇಟಿಯಾಗಿದ್ದು, ಈ ಎಲ್ಲಾ ಕೃತ್ಯ ಎಸಗಿದ್ದ. 2020ರ ಜನವರಿಯಲ್ಲಿ ತನಗೆ ನಡೆದ ದೌರ್ಜನ್ಯದ ಬಗ್ಗೆ ಜೆ ಪತ್ನಿಗೆ ತಿಳಿಯಿತು. ಮಾದಕ ದ್ರವ್ಯದ ಅಮಲಿನಿಂದ ಆಕೆಗೆ ಪ್ರಜ್ಞೆ ಬಂದಾಗ, ಅವಳು ತನ್ನ ಫೋನ್‌ನಲ್ಲಿ ವೀಡಿಯೊ ಪ್ಲೇ ಆಗುತ್ತಿರುವುದನ್ನು ನೋಡಿದ್ದಾಳೆ.

ಈ ಎಲ್ಲಾ ಚಿತ್ರಗಳನ್ನು ಜೆ ಅವರ ಪತ್ನಿ ಸ್ಕೈಪ್‌ನಲ್ಲಿ ನೋಡಿದ್ದು, ಈ ರೀತಿಯ ಕೆಲಸವನ್ನು ಬೇರೆ ಗಂಡಸರು ಕೂಡಾ ತಮ್ಮ ಹೆಂಡತಿಯ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಆಕೆಗೆ ತಿಳಿಯಿತು. ಕೂಡಲೇ ಅವಳಿಗೆ ಅವಳ ಗಂಡ ಕೂಡ ಅದೇ ರೀತಿ ಮಾಡಿದ್ದಾನೆ ಎಂಬ ವಿಷಯ ತಿಳಿದ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಈಗ ಪತಿ ಕಂಬಿ ಎಣಿಸುವ ಹಾಗೆ ಮಾಡಿದ್ದಾಳೆ.

 

 

ಇದನ್ನೂ ಓದಿ: ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಗ್ಯಾರಂಟಿ- ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ಫುಲ್ ವೈರಲ್!