Home News ಸೂರ್ಯನಿಂದ ಬೇರ್ಪಟ್ಟಿತು ಬೃಹತ್‌ ಗಾತ್ರದ ಸೌರ ಜ್ವಾಲೆ! ಖಗೋಳ ವಿಜ್ಞಾನಿಗಳಿಗೆ ಎದುರಾಯ್ತು ಅಚ್ಚರಿಯೊಂದಿಗೆ, ಆತಂಕ!

ಸೂರ್ಯನಿಂದ ಬೇರ್ಪಟ್ಟಿತು ಬೃಹತ್‌ ಗಾತ್ರದ ಸೌರ ಜ್ವಾಲೆ! ಖಗೋಳ ವಿಜ್ಞಾನಿಗಳಿಗೆ ಎದುರಾಯ್ತು ಅಚ್ಚರಿಯೊಂದಿಗೆ, ಆತಂಕ!

Hindu neighbor gifts plot of land

Hindu neighbour gifts land to Muslim journalist

ಇಡೀ ಸೌರವ್ಯೂಹದ ಒಡೆಯ ಎಂದೇ ಹೇಳುವ ಸೂರ್ಯನಿಂದ ಬೃಹತ್ತಾದ ಭಾಗವೊಂದು ಬೇರ್ಪಟ್ಟಿದ್ದು, ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿಯಾಗಿದೆ. ಸೌರ ಮಂಡಲದಲ್ಲಿ ಏನೇ ಬದಲಾವಣೆಗಳಾದರೂ ಮೊದಲೇ ಅರಿಯುತ್ತಿದ್ದ ವಿಜ್ಞಾನಿಗಳು, ಈ ಬೇರ್ಪಡುವಿಕೆ ಸಂಭವಿಸಿದ ಬಳಿಕ ಇದನ್ನು ತಮನಗಂಡಿರುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಇದು ಉಪಗ್ರಹ ಸಂವಹನದ ಮೇಲೆ ಪರಿಣಾಮ ಬೀರಲಿದ್ಯಾ ಎಂಬ ಅನುಮಾನವೂ ಮೂಡಿದೆ!

ಹೌದು, ಸೂರ್ಯನಿಂದ ಬೃಹತ್‌ ಭಾಗವೊಂದು ಬೇರ್ಪಟ್ಟಿದ್ದು, ಇದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಾಕಾರದಲ್ಲಿ ಸುತ್ತತೊಡಗಿದೆ ಎಂಬುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಪತ್ತೆಹಚ್ಚಿದೆ. ಇದು ಖಗೋಳ ವಿಜ್ಞಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಅಲ್ಲದೆ, ಇದರಿಂದ ಭೂಮಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ಅಧ್ಯಯನಗಳು ಆರಂಭವಾಗಿವೆ. ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಸೆರೆಹಿಡಿರುವ ಈ ವಿಡಿಯೋವನ್ನು ಹವಾಮಾನ ತಜ್ಞೆ ಡಾ.ತಮೀಹಾ ಸ್ಕೋವ್‌ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸೂರ್ಯನಿಂದ ಬೇರ್ಪಟ್ಟಿರುವ ಭಾಗವೊಂದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಾಕಾರದಲ್ಲಿ ಸುತ್ತುತ್ತಿದೆ ಎಂದು ಹೇಳಿದ್ದಾರೆ.

ಸುಮಾರು 11 ವರ್ಷ ಹಿಂದೆ ಇಂಥ ವಿದ್ಯಮಾನ ನಡೆದಿದ್ದರೂ, ಈಗ ಹಿಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಬೃಹತ್‌ ಭಾಗ ಸೂರ್ಯನಿಂದ ಬೇರ್ಪಟ್ಟಿದೆ. ಜತೆಗೆ ಸೂರ್ಯನಿಂದ ಈವರೆಗೂ ಬಿಡುಗಡೆಯಾಗುತ್ತಿದ್ದ ಸೌರಜ್ವಾಲೆಗಳು ಭೂಮಿಯಲ್ಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತಿದ್ದವು. ಆದರೆ ಈ ಸಲ ಬೇರ್ಪಟ್ಟಭಾಗದಿಂದ ಬೃಹತ್‌ ಸೌರಜ್ವಾಲೆಗಳು ಏಳುತ್ತಿವೆ. ಇದು ಉಪಗ್ರಹಗಳಿಂದ ಬರುವ ಸಂವಹನ ತರಂಗಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದೇ ಎಂಬುದರ ಕುರಿತಾಗಿ ಅಧ್ಯಯನಗಳು ನಡೆಯುತ್ತಿವೆ.

ಈ ರೀತಿಯ ಘಟನೆಗಳು ಈ ಹಿಂದೆಯೂ ಘಟಿಸಿದ್ದರೂ ಸಹ ಈ ಬಾರಿ ನಡೆದಿರುವ ಈ ಬೇರ್ಪಡುವಿಕೆ ವಿಜ್ಞಾನಿಗಳ ಕುತೂಹಲವನ್ನು ಹೆಚ್ಚಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ‘ಸೂರ್ಯನ ಆಂತರಿಕ ಚಲನೆಯಿಂದಾಗಿ ಉಂಟಾಗುವ ಗುರುತ್ವಾಕರ್ಷಣೆಯ ಬದಲಾವಣೆಯಿಂದ ಪ್ರತಿ 11 ವರ್ಷಗಳಿಗೆ ಸೂರ್ಯನ ಉತ್ತರ ಭಾಗದಲ್ಲಿ 55 ಡಿಗ್ರಿ ಅಕ್ಷಾಂಶ ಪ್ರದೇಶದಲ್ಲಿ ಈ ರೀತಿಯ ಸೌರಜ್ವಾಲೆಗಳು ಕಂಡುಬರುತ್ತವೆ. ಈ ಬಾರಿ ಅತಿ ದೊಡ್ಡ ಪ್ರಮಾಣದಲ್ಲಿ ಸೌರಜ್ವಾಲೆ ಚಾಚಿರುವುದು ಕುತೂಹಲ ಮೂಡಿಸಿದೆ’ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಲಾರ್ ವೋರ್ಟೆಕ್ಸ್ ಬಗ್ಗೆ ಮಾತನಾಡಿ! ಉತ್ತರದ ಪ್ರಾಮುಖ್ಯತೆಯ ವಸ್ತುವು ಮುಖ್ಯ ತಂತುಗಳಿಂದ ದೂರ ಸರಿದಿದೆ ಮತ್ತು ಈಗ ನಮ್ಮ ನಕ್ಷತ್ರದ ಉತ್ತರ ಧ್ರುವದ ಸುತ್ತಲೂ ಬೃಹತ್ ಧ್ರುವ ಸುಳಿಯಲ್ಲಿ ಪರಿಚಲನೆ ಮಾಡುತ್ತಿದೆ. ಇಲ್ಲಿ 55 ಡಿಗ್ರಿಗಿಂತ ಹೆಚ್ಚಿನ ಸೂರ್ಯನ ವಾತಾವರಣದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಪರಿಣಾಮಗಳನ್ನು ಅತಿಯಾಗಿ ಹೇಳಲಾಗುವುದಿಲ್ಲ.! ” ಎಂದು ಡಾ ಸ್ಕೋವ್ ಕಳೆದ ವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.