Home News Viral Video: ನೋಡ ನೋಡುತ್ತಿದ್ದಂತೆ ಮುರಿದು ಬಿತ್ತು 360 ಡಿಗ್ರಿಯ ಬೃಹತ್ ಜೋಕಾಲಿ – ಭಯಾನಕ...

Viral Video: ನೋಡ ನೋಡುತ್ತಿದ್ದಂತೆ ಮುರಿದು ಬಿತ್ತು 360 ಡಿಗ್ರಿಯ ಬೃಹತ್ ಜೋಕಾಲಿ – ಭಯಾನಕ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Viral Video : ಪಾರ್ಕ್ ನಲ್ಲಿರುವ ಬೃಹತ್ ಸ್ವಿಂಗ್ ಮುರಿದು ಬಿದ್ದು 23 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಅರೇಬಿಯಾದಲ್ಲಿ ನಡೆದಿದೆ.

ಹೌದು, ಸೌದಿ ಅರೇಬಿಯಾದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ (Green Mountain park in Saudi Arabia) 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿ ರೈಡ್ (360 Degree Ride) ಮಧ್ಯದ ಕಂಬವೇ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ಘಟನೆಯಲ್ಲಿ ಬೃಹತ್ ಜೋಕಾಲಿಯಲ್ಲಿ ಕುಳಿತಿದ್ದ 23 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರಂತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಅಂದಹಾಗೆ ವಿಡಿಯೋದಲ್ಲಿ ಜೋಕಾಲಿಯ ಮಧ್ಯದ ಕಂಬವು ಎರಡು ಭಾಗಗಳಾಗಿ ಕಟ್‌ ಆಗುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆಯ ಸಮಯದಲ್ಲಿ, ಹಲವಾರು ಯುವಕರು ಮತ್ತು ಮಹಿಳೆಯರು ರೈಡ್‌ನಲ್ಲಿದ್ದರು. ಇದ್ದಕ್ಕಿದ್ದಂತೆ, ಒಂದು ಕ್ರ್ಯಾಕ್ಲಿಂಗ್ ಶಬ್ದ ಕೇಳಿ, ಜೋಕಾಲಿ ಅರ್ಧದಷ್ಟು ಮುರಿದುಹೋಗಿದ್ದು, ಅದೃಷ್ಟವಶಾತ್‌ ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಗಾಯಗೊಂಡಿರುವ 23 ಜನರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Chattisgarh: : ‘ರಾಧೇ.. ರಾಧೇ..’ ಎಂದು ಶುಭ ಕೋರಿದ ನರ್ಸರಿ ವಿದ್ಯಾರ್ಥಿನಿ – ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಶಿಕ್ಷಕಿ