Home News Digital Property Records: ರಾಜ್ಯದ ಜನತೆಗೆ ಸಿಹಿ ಸುದ್ದಿ: ಇನ್ನು ಇಲ್ಲೂ ದೊರಕಲಿದೆ ಆಸ್ತಿ ಡಿಜಿಟಲ್‌...

Digital Property Records: ರಾಜ್ಯದ ಜನತೆಗೆ ಸಿಹಿ ಸುದ್ದಿ: ಇನ್ನು ಇಲ್ಲೂ ದೊರಕಲಿದೆ ಆಸ್ತಿ ಡಿಜಿಟಲ್‌ ದಾಖಲೆ

Hindu neighbor gifts plot of land

Hindu neighbour gifts land to Muslim journalist

Digital Property Records: ಆಸ್ತಿ ದಾಖಲೆಗಳಿಗಾಗಿ ಜನ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಆಸ್ತಿ ದಾಖಲೆ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಆನ್ಲೈನ್‌ ಮೂಲಕ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗಳಲ್ಲಿ ಕೂಡಾ ಡಿಜಿಟಲ್‌ ದಾಖಲೆ ನೀಡಲಾಗುವುದು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸ ಸೌಧದಲ್ಲಿ ಶುಕ್ರವಾರ ಭು ಸುರಕ್ಷಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದವರಿಗೂ ಡಿಜಿಟಲ್‌ ದಾಖಲೆ ಸಿಗಲು ನಾಡಕಚೇರಿಗಳಲ್ಲಿ ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ದಾಖಲೆ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜನ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ದಾಖಲೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಸೇವೆ ವಿಸ್ತರಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್‌ಗಳ ಮೂಲಕ ಡಿಜಿಟಲ್‌ ದಾಖಲೆಗಳನ್ನು ಪಡೆಯಬಹುದು. ಆಸ್ತಿ ದಾಖಲೆಯನ್ನು ತಾವೇ ಬೆರಳ ತುದಿಯಲ್ಲಿ ಪಡೆಯುವ ರೀತಿ ಮಾಡುವುದು ಯೋಜನೆಯ ಮೂಲ ಆಶಯ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಇದನ್ನೂ ಓದಿ: E-Kyc for Ration Card: ರಾಜ್ಯದಲ್ಲಿ ಪಡಿತರಕ್ಕೆ ಇ-ಕೆವೈಸಿ ಕಡ್ಡಾಯ: ಇಲ್ಲದಿದ್ದರೆ ರೇಷನ್‌ ಕಾರ್ಡ್‌ ರದ್ದು-ಸಚಿವ ಮುನಿಯಪ್ಪ