

ಮೊಗ್ರು: ರಾಷ್ಟ್ರಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ನಿವೃತ್ತ ಸೇನಾನಿಗಳ ಸಂಘ, ಊರ ಪರವೂರ ದೇಶ ಭಕ್ತರ ಸಹಕಾರದೊಂದಿಗೆ ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಬರೆಮೇಲು ಮುಗೇರಡ್ಕ ಇವರಿಗೆ ವೈಭವಪೂರ್ಣ ಮೆರವಣಿಗೆ ಹಾಗೂ ಅಭಿನಂದನಾ ಕಾರ್ಯಕ್ರಮವು ನಡೆಯಲಿದೆ.

ದೇಶದ ರಕ್ಷಣಾ ವಿಭಾಗದ ಭೂಸೇನೆಯಲ್ಲಿ 22 ವರ್ಷಗಳ ಕಾಲ ಅಪ್ರತಿಮ ಸೇವೆಗೈದು ನಿವೃತರಾಗಿ ಹುಟ್ಟೂರಿಗೆ ಆಗಮಿಸುತ್ತಿರುವ ಭಾರತಾಂಬೆಯ ಹೆಮ್ಮೆಯ ಸುಪುತ್ರ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ, ಬರೆಮೇಲು ನಿವಾಸಿ ದೇವಪ್ರಸಾದ್ ಗೌಡ ರವರು 01 ಫೆಬ್ರವರಿ 2026, ಆದಿತ್ಯವಾರ ಸಂಜೆ: 4.30 ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಕುಪ್ಪೆಟ್ಟಿ- ಉರುವಾಲು- ಪದ್ಮುಂಜ- ಮೈರೋಳ್ತಡ್ಕ – ಅಲೆಕ್ಕಿ ಮೊಗ್ರು – ಮುಗೇರಡ್ಕ ದೈವಸ್ಥಾನ ಬಳಿಯವರೆಗೆ ಮೆರವಣಿಗೆ ಮೂಲಕ ಸಾಗಲಿದೆ.
ಸಂಜೆ 5.30 ಕ್ಕೆ ಸರಿಯಾಗಿ ಮುಗೇರಡ್ಕ ದೈವಸ್ಥಾನದ ಬಳಿ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆoದು ರಾಷ್ಟ್ರಭಕ್ತ ವೇದಿಕೆ ಬಂದಾರು,ಮೊಗ್ರು ಗ್ರಾಮ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













