Home News ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ ಧರ್ಮಗುರು!

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ ಧರ್ಮಗುರು!

Hindu neighbor gifts plot of land

Hindu neighbour gifts land to Muslim journalist

Iran: ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಫತ್ವಾ ಅಥವಾ ಧಾರ್ಮಿಕ ಆದೇಶ ಹೊರಡಿಸಿದ್ದು, ಅವರನ್ನು ದೇವರ ಶತ್ರುಗಳು ಎಂದು ಕರೆದಿದ್ದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಇಸ್ಲಾಮಿಕ್ ಗಣರಾಜ್ಯ ಇರಾನ್ ನಾಯಕತ್ವಕ್ಕೆ ಬೆದರಿಕೆ ಹಾಕಿದ್ದಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ನಾಶ ಮಾಡುವಂತೆ ಅಯತೊಲ್ಲಾ ನಾಸರ್ ಮಕರೆಮ್ ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ನಾಯಕತ್ವಕ್ಕೆ ಬೆದರಿಕೆ ಹಾಕುವ ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು ‘ಮೊಹರೆಬ್’ ಎಂದು ಪರಿಗಣಿಸಲಾಗುತ್ತದೆ ಎಂದು ಮಕರೆಮ್ ಹೇಳಿರುವುದಾಗಿ ಮೆಹರ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ ಎನ್ನಲಾಗಿದೆ.

ಮೊಹರೆಬ್ ಅಂದ್ರೆ ದೇವರ ವಿರುದ್ದ ಯುದ್ಧ ಮಾಡುವ ವ್ಯಕ್ತಿ ಎಂದರ್ಥ. ಇರಾನ್ ದೇಶದ ಕಾನೂನಿನ ಪ್ರಕಾರ ‘ಮೊಹರೆಬ್ ‘ ವ್ಯಕ್ತಿಗಳಿಗೆ ಮರಣದಂಡನೆ, ಅಂಗಾಂಗ ಕತ್ತರಿಸುವಿಕೆ ಅಥವಾ ಗಡಿಪಾರು ರೀತಿಯ ಶಿಕ್ಷೆ ವಿಧಿಸಲಾಗುತ್ತದೆಯಂತೆ.

“ಮುಸ್ಲಿಮರು ಅಥವಾ ಇಸ್ಲಾಮಿಕ್ ದೇಶಗಳು ಇಂತಹ ಶತ್ರುವಿಗೆ ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ಹರಾಮ್ (ನಿಷಿದ್ಧ) ವಾಗಿದೆ. ಪ್ರಪಂಚದಾದ್ಯಂತದ ಎಲ್ಲ ಮುಸ್ಲಿಮರು ಸೇರಿ ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಅವಶ್ಯಕ ಎಂದು ಫತ್ವಾದಲ್ಲಿ ಸೇರಿಸಲಾಗಿದೆ. ಈ ಕೆಲಸಕ್ಕೆ ಹೊರಡುವ, ದೇವರ ಕರ್ತವ್ಯವನ್ನು ಪಾಲಿಸುವ ಮುಸ್ಲಿಂ ಇದರಲ್ಲಿ ಕಷ್ಟ ಅಥವಾ ನಷ್ಟವನ್ನು ಅನುಭವಿಸಿದರೆ, ಆತ ಅಥವಾ ಆಕೆ ದೇವರಿಂದ ತಕ್ಕ ಪ್ರತಿಫಲ ಪಡೆಯುತ್ತಾರೆ ಎಂದು ಅದು ಹೇಳಿದೆ.

ಜೂನ್ 13ರಂದು ಇಸ್ರೇಲ್ ಇರಾನ್‌ನಲ್ಲಿ ಬಾಂಬ್ ದಾಳಿ ನಡೆಸಿ, ಅದಕ್ಕೆ ಇರಾನ್ ಕೂಡಾ ಉಗ್ರವಾಗಿ ಪ್ರತಿಕ್ರಿಯಿಸಿದ ಎರಡು ವಾರಗಳ ನಂತರ ಈ ಧಾರ್ಮಿಕ ತೀರ್ಪು ಬಂದಿದೆ.

ಇದನ್ನೂ ಓದಿ:Heart Attack: ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ ಹಿನ್ನೆಲೆ – ಆರೋಗ್ಯ ಇಲಾಖೆಯಿಂದ ಟೆಕ್ನಿಕಲ್ ಕಮಿಟಿ ರಚನೆ