Home News Belthangady: ಬೆಳ್ತಂಗಡಿ ಮನೆಯಲ್ಲಿ ದೆವ್ವದ ಕಾಟ ಪ್ರಕರಣ – ಇದ್ದಕ್ಕಿದ್ದಂತೆ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಮನೆಗೆ...

Belthangady: ಬೆಳ್ತಂಗಡಿ ಮನೆಯಲ್ಲಿ ದೆವ್ವದ ಕಾಟ ಪ್ರಕರಣ – ಇದ್ದಕ್ಕಿದ್ದಂತೆ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಮನೆಗೆ ಮರಳಿದ ಕುಟುಂಬ!! ಏನಿದು ಅಚ್ಚರಿ?

Hindu neighbor gifts plot of land

Hindu neighbour gifts land to Muslim journalist

Belthangady : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸಮೀಪದ ಕೊಲ್ಪೆದಬೈಲ್‌ ಎಂಬಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿನ ಉಮೇಶ್‌ ಶೆಟ್ಟಿ ಅವರ ಮನೆಯಲ್ಲಿ ಇಂತಹ ಘಟನಾವಳಿಗಳು ನಡೆಯುತ್ತಿದ್ದು, ಮನೆಯಲ್ಲಿ ಯಾರೋ ಅಗೋಚರವಾಗಿ ಓಡಾಡಿದಂತೆ ಭಾಸವಾಗುವುದು. ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು ಉಮೇಶ್‌ ಶೆಟ್ಟಿ ಅವರನ್ನು ಆತಂಕಕ್ಕೆ ತಳ್ಳಿತ್ತು. ಆದರೀಗ ಈ ಎಲ್ಲಾ ಸಮಸ್ಯೆ ಇದ್ದಕ್ಕಿದ್ದಂತೆ ಪರಿಹಾರವಾಗಿದೆ ಎನ್ನಲಾಗಿದೆ.

ಹೌದು, ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೂರಾರು ಜನರು ಉಮೇಶ್ ಶೆಟ್ಟಿ ಅವರ ಮನೆ ಹತ್ತಿರ ಆಗಮಿಸಿದ್ದರು. ಈ ನಡುವೆ ಇಡೀ ಕುಟುಂಬ ಮನೆ ಬಿಟ್ಟು ತೆರಳಿತ್ತು, ಇದೀಗ ಮರಳಿ ಬಂದಿರುವ ಅವರು ಸಮಸ್ಯೆ ಎಲ್ಲಾ ನಿವಾರಣೆ ಆಗಿದೆ ಎಂದಿದ್ದಾರೆ. ಆದರೆ ಈಗ ಅವೆಲ್ಲ ನಿವಾರಣೆಯಾಗಿದೆ. ನಮ್ಮ ಮನೆಯ ದೈವದ ತೊಂದರೆಯಿಂದ ಹೀಗಾಗುತ್ತಿತ್ತು. ಅದಕ್ಕೆ ಪರಿಹಾರ ಮಾಡಿಕೊಳ್ಳಲಾಗಿದೆ ಅನಂತರ ಯಾವುದೇ ಸಮಸ್ಯೆ ಇಲ್ಲ ಈಗ ಎಲ್ಲಾ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.

ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವೂ ನಾಪತ್ತೆಯಾಗಿತ್ತು ಎಂದು ಮನೆಯವರು ಹೇಳಿದ್ದರು. ಆದರೆ ಇದೀಗ ಪತ್ತೆಯಾಗಿದೆ. ಅದು ದೇವರ ಫೋಟೋದ ಹಿಂದೆ ಇತ್ತು ಎಂದು ತಿಳಿಸಿದ್ದಾರೆ.