Home News Shivamogga : ಶಿವಮೊಗ್ಗದಲ್ಲೊಂದು ಅಮಾನುಷ ಘಟನೆ – 67 ವರ್ಷದ ಅಜ್ಜಿಯನ್ನು ಮರಕ್ಕೆ ಕಟ್ಟಿ ಹಲ್ಲೆ

Shivamogga : ಶಿವಮೊಗ್ಗದಲ್ಲೊಂದು ಅಮಾನುಷ ಘಟನೆ – 67 ವರ್ಷದ ಅಜ್ಜಿಯನ್ನು ಮರಕ್ಕೆ ಕಟ್ಟಿ ಹಲ್ಲೆ

Hindu neighbor gifts plot of land

Hindu neighbour gifts land to Muslim journalist

Shivamogga : ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಅಮಾನುಷ ಘಟನೆ ಎಂದು ಬೆಳಕ ಬಂದಿದ್ದು ಸುಮಾರು 67 ವರ್ಷದ ಅಜ್ಜಿ ಒಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಗೌತಮಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 67 ವರ್ಷದ ವೃದ್ಧೆ ಹುಚ್ಚಮ್ಮ ಎಂಬಾಕೆಯನ್ನು ಕೇವಲ ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಗ್ರಾಮದ ಪ್ರೇಮ, ಮಂಜುನಾಥ್ ಮತ್ತು ದರ್ಶನ್ ಎಂಬ ಮೂವರು ಸೇರಿ, ವೃದ್ದೆಯನ್ನು ನಿಂದಿಸಿ, ಕಂಬಕ್ಕೆ ಕಟ್ಟಿ ದೈಹಿಕವಾಗಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ಗೌತಮಪುರ ಗ್ರಾಮದ ಹುಚ್ಚಮ್ಮ ಅವರು ತಮ್ಮ ಮನೆಯ ಮುಂದೆ ಪ್ರೇಮ ಎಂಬ ಮಹಿಳೆ ಕಸ ತಂದು ಹಾಕಿದ್ದನ್ನು ಪ್ರಶ್ನಿಸಿದ್ದರು. ಈ ಸಣ್ಣ ವಿಷಯಕ್ಕೆ ಕೋಪಗೊಂಡ ಪ್ರೇಮ, ಜೊತೆಗೆ ಮಂಜುನಾಥ್ ಮತ್ತು ದರ್ಶನ್ ಎಂಬ ಇಬ್ಬರು ಯುವಕರು, ಹುಚ್ಚಮ್ಮ ಅವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ ಹಗ್ಗದಿಂದ ಕಂಬಕ್ಕೆ ಕಟ್ಟಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:Bengaluru : ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಆರೋಪಿ ಸಂಶುದ್ದೀನ್ ಅರೆಸ್ಟ್!!