Home News CBSE: CBSE ಪರೀಕ್ಷೆ ಬರೆಯಲು ಎಂದರೆ 75% ಹಾಜರಾತಿ ಕಡ್ಡಾಯ: ಸಿಬಿಎಸ್‌ಇ ಹೊಸ ರೂಲ್ಸ್

CBSE: CBSE ಪರೀಕ್ಷೆ ಬರೆಯಲು ಎಂದರೆ 75% ಹಾಜರಾತಿ ಕಡ್ಡಾಯ: ಸಿಬಿಎಸ್‌ಇ ಹೊಸ ರೂಲ್ಸ್

Hindu neighbor gifts plot of land

Hindu neighbour gifts land to Muslim journalist

CBSE: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ನಿರ್ದೇಶನವನ್ನು ಹೊರಡಿಸಿದ್ದು, 2025-26 ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ (Board Exam) ವಿದ್ಯಾರ್ಥಿಗಳು 75% ರಷ್ಟು ಹಾಜರಾತಿ (Attendance) ಕಡ್ಡಾಯಗೊಳಿಸಬೇಕೆಂದು ತಿಳಿಸಿದೆ.

ಈ ಬಗ್ಗೆ ಸಿಬಿಎಸ್‌ಇ ವಿದ್ಯಾರ್ಥಿಗಳ ಹಾಜರಾತಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವಂತೆ ಶಾಲೆಗಳಿಗೆ ಪತ್ರ ಬರೆದಿದೆ. ಸಿಬಿಎಸ್‌ಇ ಪರೀಕ್ಷಾ ನಿಯಮಗಳ ಪ್ರಕಾರ ಬೋರ್ಡ್ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಕನಿಷ್ಠ 75% ಹಾಜರಾತಿ ಹೊಂದಬೇಕು. ವೈದ್ಯಕೀಯ ಕಾರಣ, ಕೌಟುಂಬಿಕ ಕಾರಣ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕಾಠ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ವಿದ್ಯಾರ್ಥಿಗಳಿಗೆ ಮಾತ್ರವೇ 25% ವಿನಾಯಿತಿ ಸಿಗಲಿದೆ. ಹಾಜರಾತಿ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದೂ ಸಿಬಿಎಸ್‌ಇ ಎಚ್ಚರಿಸಿದೆ.

ಯಾವುದೇ ವಿದ್ಯಾರ್ಥಿ ವೈದ್ಯಕೀಯ ಅಥವಾ ಇತರ ಕಾರಣಗಳಿಗೆ ರಜೆ ಪಡೆಯುವುದಿದ್ದರೆ ಅಗತ್ಯ ದಾಖಲೆಗಳನ್ನು ಶಾಲೆಗಳಿಗೆ ಸಲ್ಲಿಸಬೇಕು. ಲಿಖಿತ ವಿನಂತಿಗಳಿಲ್ಲದ ರಜೆಗಳನ್ನು ಶಾಲೆಗೆ ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸುವುದಾಗಿ ತಿಳಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸುವ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವಂತೆ ಶಾಲೆಗಳಿಗೂ ಸೂಚಿಸಲಾಗಿದೆ.

ಇದನ್ನೂ ಓದಿ: Sullia: ಸಂಪಾಜೆ: ಆನೆ ದಾಳಿಗೆ ಕೃಷಿಕ ಸಾವು!