Home News Karawara: ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

Karawara: ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

Tragic Story

Hindu neighbor gifts plot of land

Hindu neighbour gifts land to Muslim journalist

Karawara: ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದ ಸಮಯದಲ್ಲಿ ಬಾಲಕನೋರ್ವ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಕೃತಿಕ್‌ ರೆಡ್ಡಿ (8) ಮೃತ ಬಾಲಕ.

ಬೆಂಗಳೂರಿನ ಬಿದರಹಳ್ಳಿಯ ನಿವಾಸಿ. ಬಿದರಹಳ್ಳಿಯ ಕೆ.ರವಿರೆಡ್ಡಿ ಕುಟುಂಬ ಸಮೇತರಾಗಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದು, ಕಡಲ ತೀರದಲ್ಲಿ ಆಟವಾಡಲೆಂದು ಕುಟುಂಬ ಸದಸ್ಯರು ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಇಳಿಯಲು ಹೋದ ಬಾಲಕ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾನೆ. ಆತನನ್ನು ರಕ್ಷಿಸಲೆಂದು ಮಹಿಳೆ ವಸಂತ ಪ್ರಯತ್ನ ಪಟ್ಟಿದ್ದು, ಆದರೆ ಅವರು ಕೂಡಾ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಇದನ್ನೂ ಓದಿ:Belthangady: ಮಹೇಶ್‌ ಶೆಟ್ಟಿ ತಿಮರೋಡಿ ಒಂದು ವರ್ಷ ಗಡಿಪಾರು

ಲೈಫ್‌ಗಾರ್ಡ್‌ಗಳ ಸಹಾಯದಿಂದ ವಸಂತ ಅವರನ್ನು ರಕ್ಷಣೆ ಮಾಡಲಾಗಿದ್ದು, 8 ವರ್ಷದ ಬಾಲಕ ಸಮುದ್ರ ಪಾಲಾಗಿದ್ದಾನೆ.