Home News 7th Pay Commission: ಶೀಘ್ರದಲ್ಲಿ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ! ಸಂಪುಟ ಸಭೆಯಲ್ಲಿ...

7th Pay Commission: ಶೀಘ್ರದಲ್ಲಿ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ! ಸಂಪುಟ ಸಭೆಯಲ್ಲಿ ಮಹತ್ವ ನಿರ್ಧಾರ!

7th Pay Commission

Hindu neighbor gifts plot of land

Hindu neighbour gifts land to Muslim journalist

7th Pay Commission: 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿ ಶಿಫಾರಸು ಆಧರಿಸಿ ವೇತನ ಪರಿಷ್ಕರಣೆ ಬಗ್ಗೆ ಸಂಪುಟ ಸಭೆಯಲ್ಲಿ ಶೀಘ್ರದಲ್ಲಿ  ನಿರ್ಧಾರವಾಗುವ ನಿರೀಕ್ಷೆ ಇದೆ. ಹೌದು, ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಇದ್ದ ಹಿನ್ನೆಲೆ 3 ತಿಂಗಳ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ಸಭೆ ಇಂದು (ಗುರುವಾರ) ನಡೆಯುತ್ತಿದ್ದು, ಇದರಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಆಧಾರದಲ್ಲಿ ನೌಕರರ ವೇತನ ಪರಿಷ್ಕರಣೆಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

HSRP ನಂಬರ್ ಪ್ಲೇಟ್ ಅಳವಡಿಕೆಯ ಗಡುವು ಮತ್ತೆ ವಿಸ್ತರಣೆ, ಹೊಸ ಆದೇಶ !

ಸದ್ಯ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ (7th Pay Commission)  ವರದಿಯನ್ನು ಕಳೆದ ಮಾರ್ಚ್ 16 ರಂದು ಸಿಎಂ ಸಿದ್ದರಾಮಯ್ಯ  ಅವರಿಗೆ ಅಂತಿಮವಾಗಿ ಮನವಿ ಸಲ್ಲಿಸಿತ್ತು.

ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯ ಪ್ರಕಾರ ಶೇ. 31ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ, ಶೇ .27.50 ಫಿಟ್‌ಮೆಂಟ್‌ ನೀಡುವ ಮೂಲಕ ನೌಕರರ ಕನಿಷ್ಠ ಮೂಲ ವೇತನವನ್ನು ಸದ್ಯದ 17,000 ರೂ.ಗಳಿಂದ 27,000 ರೂ.ಗೆ ಏರಿಕೆ ಮಾಡಲು ಸುಧಾಕರರಾವ್ ಆಯೋಗ ಶಿಫಾರಸು ಮಾಡಿತ್ತು. ಆಯೋಗದ ಅಂತಿಮ ವರದಿ ನಿರೀಕ್ಷಿಸಿ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆ ಚುನಾವಣೆಗೆ ಮುನ್ನ ಶೇ. 17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿತ್ತು. ಅಂತಿಮವಾಗಿ ವೇತನ ಎಷ್ಟು ಪರಿಷ್ಕರಣೆ ಆಗಲಿದೆ ಎಂಬುದು ಕಾದು ನೋಡಬೇಕಿದೆ.

Udupi: ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ