Home News UP: 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧ – ಮದುವೆಯ ಮರುದಿನವೇ ಸಾವು...

UP: 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧ – ಮದುವೆಯ ಮರುದಿನವೇ ಸಾವು !!

Hindu neighbor gifts plot of land

Hindu neighbour gifts land to Muslim journalist

UP: ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆ(Marriage)ಯಾಗಿದ್ದು, ಮದುವೆಯಾದ ಮರುದಿನವೇ ವೃದ್ಧ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು, ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ 75ರ ವೃದ್ಧರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ 35ರ ಯುವತಿಯನ್ನು ಮದುವೆಯಾಗಿದ್ದು, ಮದುವೆಯಾದ ಮರುದಿನವೇ ಅವರು ಇಹಲೋಕ ತ್ಯಜಿಸಿದ್ದಾರೆ. ಇದರಿಂದಾಗಿ 35ರ ಹರೆಯದ ಯುವತಿಗೆ ಇಳಿವಯಸ್ಸಿನಲ್ಲೇ ವಿಧವೆ ಪಟ್ಟ ಸಿಕ್ಕಿದೆ.

ಸಂಗ್ರರಾಮ್ ಅವರು ವರ್ಷದ ಹಿಂದಷ್ಟೇ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು ಅಂದಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು ಅವರಿಗೆ ಮಕ್ಕಳಿರಲಿಲ್ಲಕೃಷಿಯ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಪತ್ನಿಯೂ ಅಗಲಿದ್ದರಿಂದ ಆತನ ಕುಟುಂಬದವವರು ಮರು ಮದುವೆಯಾಗುವಂತೆ ಸಲಹೆ ನೀಡಿದ್ದರು. ಕುಟುಂಬದವರ ಮಾತುಕೇಳಿ ಸಂಗ್ರರಾಮ್ ಅವರು ಮದುವೆಗೆ ಒಪ್ಪಿದ್ದು, ಅದರಂತೆ ಸೆಪ್ಟೆಂಬರ್ 29ರಂದು ಸೋಮವಾರ ಅವರು ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಎಂಬುವರನ್ನು ಮದುವೆಯಾದರು.

ದಂಪತಿ ನ್ಯಾಯಾಲಯದಲ್ಲಿ ಮದುವೆಯನ್ನು ನೋಂದಾಯಿಸಿಕೊಂಡರು ಮತ್ತು ನಂತರ ಸ್ಥಳೀಯ ದೇವಸ್ಥಾನಕ್ಕೆ ಹೋಗಿ ವಿವಾಹವಾದರು. ಮದುವೆ ಬಳಿಕ ಮಹಿಳೆ ಮನ್ಭವತಿ ಮಾತನಾಡಿ, ನನ್ನ ಪತಿ ನನ್ನ ಪಕ್ಕಳನ್ನು ನೋಡಿಕೊಳ್ಳುತ್ತೇನೆ, ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂಬುದಾಗಿ ಹೇಳಿದ್ದಾಳೆ. ಮದುವೆಯ ಮರುದಿನವೇ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:Rain: ಅ.5 ರವರೆಗೂ ರಣಭೀಕರ ಮಳೆ!

ಅಂದಹಾಗೆ ಮಂಗಳವಾರ ಬೆಳಿಗ್ಗೆ, ಸಂಗ್ರು ಅವರ ಆರೋಗ್ಯ ಹದಗೆಟ್ಟಿತು, ಮತ್ತು ನೆರೆಹೊರೆಯವರು ಅವರನ್ನು ಜೌನ್‌ಪುರ ಉಜಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.