

Miss World: ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಸಾಮಾನ್ಯ ವಿಷಯವಲ್ಲ. ಅಲ್ಲಿಗೆ ಹೋಗಲು ನೀವು ಹಲವಾರು ಹಂತಗಳನ್ನು ಹಾದು ಹೋಗಬೇಕು. 20 ವರ್ಷದ ಯುವತಿಯರು ತಮ್ಮ ಸೌಂದರ್ಯದಿಂದ ರಾಂಪ್ ವಾಕ್ ಮಾಡುವುದಲ್ಲದೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಸೌಂದರ್ಯ ಕಿರೀಟವನ್ನು ತಮ್ಮದಾಗಿಸಿಕೊಳ್ಳಲುತ್ತಾರೆ. ಇದೆಲ್ಲಾ ಗೊತ್ತಿರುವ ವಿಷಯಗಳೇ. ಈಗೇಕೆ ಇದರ ಬಗ್ಗೆ ಮಾತು ಅಂದ್ರಾ ಅದಕ್ಕೆ ಕಾರಣವೂ ಇದೆ. ಏಕೆಂದರೆ 60 ವರ್ಷದ ಅಜ್ಜಿಯೊಬ್ಬರು ಇತ್ತೀಚಿನ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವ ಸುಂದರಿ ಬ್ಯೂನಸ್ ಐರಿಸ್ ಕಿರೀಟವನ್ನು ಗೆದ್ದಿರುವ ವೃದ್ಧೆ ಈ ವರ್ಷ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.
ಅರ್ಜೆಂಟೀನಾದ ಅಲೆಜಾಂಡ್ರಾ ಮರಿಸಾ ರೋಡ್ರಿಗೋಜ್ ಎಂಬ 60 ವರ್ಷದ ಮಹಿಳೆ ಹದಿಹರೆಯದ ಹುಡುಗಿಯರೊಂದಿಗೆ ಸ್ಪರ್ಧಿಸಿ ಗೆದ್ದಿದ್ದಾರೆ. 60ರ ಹರೆಯದಲ್ಲೂ ತನ್ನ ಸೌಂದರ್ಯದಿಂದ ಹುಡುಗರನ್ನು ಮುದಗೊಳಿಸುತ್ತಿರುವ ಈ ಮುಹಿಳೆ ಇತ್ತೀಚೆಗಷ್ಟೇ ವಿಶ್ವಸುಂದರಿಯನ್ನು ಪ್ರತಿನಿಧಿಸುವ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ಇತ್ತೀಚೆಗೆ ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ಸೌಂದರ್ಯ ಸ್ಪರ್ಧೆಗಳು ನಡೆದವು. ಆ ಸ್ಪರ್ಧೆಗಳಲ್ಲಿ ಲಾ ಪ್ಲಾಟಾ ನಗರದ 60 ವರ್ಷದ ಅಲೆಜಾಂಡ್ರಾ ವಿಶ್ವ ಸುಂದರಿ ಬ್ಯೂನಸ್ ಐರಿಸ್ ಪ್ರಶಸ್ತಿಯನ್ನು ಗೆದ್ದು ಎಲ್ಲರನ್ನು ಅಚ್ಚರಿಗೊಳಿಸಿದರು.
ಇದನ್ನೂ ಓದಿ: ಈ ಯೋಜನೆ ಮಾಡಿಸಿದರೆ ಸಾಕು, ನಮ್ಮ ಮಕ್ಕಳ ಭವಿಷ್ಯ ಬಂಗಾರವಾಗುತ್ತೆ!













