Home News ಬಂಟ್ವಾಳ : ಭೀಕರ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಮೃತ್ಯು!!

ಬಂಟ್ವಾಳ : ಭೀಕರ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಮೃತ್ಯು!!

Hindu neighbor gifts plot of land

Hindu neighbour gifts land to Muslim journalist

ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಸಿದ್ದಕಟ್ಟೆ ಸಮೀಪದ ಸೊರ್ನಾಡು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತ ಯುವಕರನ್ನು ಲೊರೆಟ್ಟೋ ಪದವು ನಿವಾಸಿಗಳಾದ ನಿತಿನ್ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಓರ್ವ ಮೆಕ್ಯಾನಿಕ್ ಆಗಿದ್ದು, ಇನ್ನೊರ್ವ ಪಿಕ್ ಅಪ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕರ್ತವ್ಯ ಮುಗಿಸಿ ಒಂದೇ ಬೈಕಿನಲ್ಲಿ ಹಿಂದಿರುಗುತ್ತಿದ್ದಾಗ ನಡೆದ ದುರ್ಘಟನೆ ಇಬ್ಬರನ್ನೂ ಬಲಿ ಪಡೆದಿದೆ.

ಬಿಸಿ ರೋಡ್ ನಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದ್ದು,ಅಪಘಾತ ಎಸಗಿದ ಬಳಿಕ ಚಾಲಕ ಲಾರಿ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಕೂಡಲೇ ಪ್ರತ್ಯಕ್ಷದರ್ಶಿಗಳ ಮಾಹಿತಿಯ ಮೇರೆಗೆ ಸ್ಥಳೀಯರು ಬೆನ್ನಟ್ಟಿ ಪತ್ತೆ ಹಚ್ಚಿ ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.