Home News Mangaluru: ಸುಹಾಸ್ ಹತ್ಯೆಗೆ 50 ಲಕ್ಷ ಫಂಡಿಂಗ್ – ಪ್ರಭಾವಿ ಮುಸ್ಲಿಂ ನಾಯಕರ ಕೈವಾಡ?

Mangaluru: ಸುಹಾಸ್ ಹತ್ಯೆಗೆ 50 ಲಕ್ಷ ಫಂಡಿಂಗ್ – ಪ್ರಭಾವಿ ಮುಸ್ಲಿಂ ನಾಯಕರ ಕೈವಾಡ?

Hindu neighbor gifts plot of land

Hindu neighbour gifts land to Muslim journalist

Mangaluru : ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿದೆ ಎಂಬ ಅನುಮಾನ ಮೂಡಿತ್ತು. ಆದರೆ ಇದರ ಬೆನ್ನಲ್ಲೇ ಸುಹಾಸ್ ಹತ್ಯೆಗೆ ಬರೋಬ್ಬರಿ 50 ಲಕ್ಷ ಫಂಡಿಂಗ್ ಮಾಡಲಾಗಿತ್ತು ಎಂಬ ಗಂಭೀರ ಆರೋಪವನ್ನು ಕೇಳಿಬಂದಿದೆ.

ಆರಂಭದಲ್ಲಿ ಪಾಜಿಲ್ ಹತ್ಯೆ ಸೇಡಿಗಾಗಿ 5 ಲಕ್ಷ ವ್ಯವಹಾರದ ಮುಖಾಂತರ ಸುಹಾಸ್ ಹತ್ಯೆ ನಡೆದಿತ್ತು ಎನ್ನಲಾಗಿತ್ತು. ಅದರೀಗ ಕೇವಲ ಐದು ಲಕ್ಷಕ್ಕಾಗಿ ಮಾತ್ರ ಈ ಹತ್ಯೆ ನಡೆದಿಲ್ಲ ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ ಪ್ರಕಟವಾಗಿದೆ.

ಹೌದು. ಫಾಝಿಲ್ ಹತ್ಯೆಯನ್ನು (Fazil Murder) ಅರಗಿಸಿಕೊಳ್ಳಲಾಗದ ಪ್ರಭಾವಿ ಮುಸ್ಲಿಮರು (Muslims) ಫಾಝಿಲ್ ಸಹೋದರನ ಕೈ ಬಲಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಇದೀಗ ಹಲವು‌ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳ ಬಂಧನದ ಬಳಿಕ ಕೇವಲ ಲಕ್ಷ ಸುಪಾರಿ‌ ನೀಡಲಾಗಿತ್ತು ಎನ್ನುವುದು ಗೊತ್ತಾದಾಗಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಬೊಲೆರೋ ಪಿಕಪ್ ಮತ್ತು ಸ್ವಿಫ್ಟ್ ಕಾರಿನ ಮೌಲ್ಯ ಎರಡು ಸೇರಿದರೆ 10 ಲಕ್ಷರೂ. ಅಧಿಕ ಆಗುತ್ತದೆ. ಕೇವಲ 5 ಲಕ್ಷ ರೂ.ಗೆ ಈ ಹತ್ಯೆ‌ ನಡೆದಿರುವ‌ ಸಾಧ್ಯತೆ ಇಲ್ಲ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ನಿಜವಾಗಿದ್ದು ತನಿಖೆಯ ವೇಳೆ ಲಕ್ಷ ಲಕ್ಷ ಫಂಡಿಂಗ್ ಆಗಿರುವುದು ಬೆಳಕಿಗೆ ಬಂದಿದೆ.