Home News Covid cases: ರಾಜ್ಯದಲ್ಲಿ 32 ಕೋವಿಡ್ ಪ್ರಕರಣ: SARI ಕೇಸುಗಳಿಗೆ ಕಡ್ಡಾಯ ಟೆಸ್ಟ್

Covid cases: ರಾಜ್ಯದಲ್ಲಿ 32 ಕೋವಿಡ್ ಪ್ರಕರಣ: SARI ಕೇಸುಗಳಿಗೆ ಕಡ್ಡಾಯ ಟೆಸ್ಟ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ನಿನ್ನೆಯವರೆಗೂ 35 ಕೋವಿಡ್ ಕೇಸ್ ದಾಖಲಾಗಿದ್ದು, ಹೆಚ್ಚುತ್ತಿರುವ ಪ್ರಕರಣಗಳ ಭೀತಿಯಿಂದ ಆಯ್ದಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಕೋವಿಡ್ ಬಂದವರಿಗೆ ಮೈಲ್ಡ್ ಸಿಂಟಮ್ಸ್ ಇರುತ್ತದೆ ಹಾಗೂ ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ. ಪ್ರಕರಣಗಳು ತಮ್ಮ‌ಮನೆಯಲ್ಲೇ ಉಳಿಯಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು ಎಂದಿದ್ದಾರೆ. ಅನಾವಶ್ಯಕವಾಗಿ ಸದ್ಯಕ್ಕೆ ಭಯ ಬೇಡ ಎಂದಿದ್ದಾರೆ. SARI ಪ್ರಕರಣಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸೂಚನೆ ನೀಡಲಾಗಿದ್ದು, ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ಅಡ್ಮಿಟ್ ಅಗಿರುವಂತಹ ಆಸ್ಪತ್ರೆಗಳಲ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚನೆ ನೀಡಿದ್ದಾರೆ.

ನಾವು ಟೆಸ್ಟಿಂಗ್ ಕಿಟ್ ತೆಗೆದಿರಿಸಿದ್ದೇವೆ ಮತ್ತು ಟೆಸ್ಟ್ ಮಾಡಲೇಬೇಕಾದ ಟೆಸ್ಟ್ ಮಾಡುತ್ತೇವೆ. ಜ್ವರ ಬಂದವರು ತಮ್ಮ‌ಮನೆಯಲ್ಲೇ ಕಡಿಮೆಯಾಗುವವರೆಗೂ ಹೊರಬರಬಾರದು ಎಂದು ಸೂಚಿಸಿದ್ದು, ಪ್ರಕರಣಗಳ ಏರಿಕೆಯನ್ನು ಗಮನಿಸಿ, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 32 ಪ್ರಕರಣಗಳು ಇದ್ದು, ಕಳೆದ ವಾರದಿಂದ ಕೊಂಚ ಏರಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಎಂಟು ಆರ್ ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಗಳನ್ನು ಮತ್ತೆ ಓಪನ್ ಮಾಡಲು ಇಲಾಖೆ ಮುಂದಾಗಿರುತ್ತದೆ